ಬಳ್ಳಾರಿ : ಗೆಲ್ಲಿಸಿಕೊಂಡು ಬರದೇ ಇದ್ರೇ ಸಚಿವ ಸ್ಥಾನ ಕಳೆದುಕೊಳ್ಳುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ನಾಗೇಂದ್ರ ಜವಾಬ್ದಾರಿ ಕೊಟ್ಟ ಲೋಕಸಭಾ ಕ್ಷೇತ್ರ ಗೆಲ್ಲಿಸಿಕೊಂಡು ಬರದೇ ಇದ್ರೇ ಅವರು ಅಸಮರ್ಥ ಸಚಿವರಾಗ್ತಾರೆ. ಅಂಥಾ ಸಚಿವರು ಸಮರ್ಥರಲ್ಲ ಅವರು ಅಸಮರ್ಥರು ಎಂದಿದ್ದಾರೆ.
ಜೊತೆಗೆ, ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಸಚಿವರ ಜೊತೆಗೆ ಅಯಾ ಶಾಸಕರ ಜವಾಬ್ದಾರಿಯೂ ಇರುತ್ತದೆ. ನಾನು ಬಳ್ಳಾರಿ ಗೆಲ್ಲಿಸಿಕೊಂಡು ಬರುವ ಸಂಕಲ್ಪ ತೊಟ್ಟಿದ್ದೇನೆ. ಬಳ್ಳಾರಿ ಗೆದ್ದು ಸೋನಿಯಾ ಗಾಂಧಿಯವರಿಗೆ ಉಡುಗೊರೆಯಾಗಿ ಕೊಡ್ತೇನೆ ಎಂದು ನುಡಿದ ನಾಗೇಂದ್ರ, ಬಳ್ಳಾರಿಯಿಂದ ಐದು ಜನ ಟಿಕೆಟ್ ಆಕಾಂಕ್ಷಿ ಇದ್ದಾರೆ. ವೆಂಕಟೇಶ್ ಪ್ರಸಾದ್, ಮುರುಳಿ ಕೃಷ್ಣ, ಉಗ್ರಪ್ಪ, ಗುಜ್ಜಲ್ ನಾಗರಾಜ ಅರ್ಜಿ ಹಾಕಿದ್ದಾರೆ. ನಾವು ಒಮ್ಮತದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಾಗಿ ಹೇಳಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯ ಪೂರ್ವಸಿದ್ದತೆ ಕುರಿತು ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ರಾಜ್ಯದ ಸಚಿವರಿಗೆ ಎಚ್ಚರಿಕೆ ಕೊಡಲಾಗಿದೆ ಎಂದು ಬಳ್ಳಾರಿ ಉಸ್ತುವಾರಿ ಸಚಿವ ನಾಗೇಂದ್ರ ಹೇಳಿದ್ದಾರೆ. ಈ ಕುರಿತು ಗೃಹಸಚಿವ ಜಿ ಪರಮೇಶ್ವರ್ ಎಲ್ಲರ ಸಾಮರ್ಥ್ಯವನ್ನೂ ಹೈಕಮ್ಯಾಂಡ್ ಗಮನಿಸುತ್ತಿದೆ ಎಂದು ನುಡಿದ ನಾಗೇಂದ್ರ , ಮಂತ್ರಿಗಿರಿ ಕೊಟ್ಟು ಆಯಾ ಕ್ಷೇತ್ರದ ಲೋಕಸಭೆ ಅಭ್ಯರ್ಥಿ ಗೆಲ್ಲಿಸಿಕೊಂಡ ಬರದೇ ಇದ್ರೇ ಹೇಗೆ? ಕೊಟ್ಟ ಕುದುರೆ ಏರದವನು ಶೂರನು ಅಲ್ಲ ವೀರನು ಅಲ್ಲ ಎನ್ನುವಂತಾಗ್ತದೆ ಎಂದಿದ್ದಾರೆ.