Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಎಸಿಬಿ ಕಾರ್ಯವೈಖರಿಗೆ ಹೈಕೋರ್ಟ್ ಜಡ್ಜ್ ಫುಲ್ ತರಾಟೆ?

ಎಸಿಬಿ ಕಾರ್ಯವೈಖರಿಗೆ ಹೈಕೋರ್ಟ್ ಜಡ್ಜ್ ಫುಲ್ ತರಾಟೆ?
ಬೆಂಗಳೂರು , ಶುಕ್ರವಾರ, 8 ಜುಲೈ 2022 (08:40 IST)
ಬೆಂಗಳೂರು : ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳದ ಕಾರ್ಯವೈಖರಿ ವಿರುದ್ಧ ಹೈಕೋರ್ಟ್ ನ್ಯಾಯಮೂರ್ತಿ ಹೆಚ್ಪಿ ಸಂದೇಶ್ ಇವತ್ತು ಕೂಡ ಚಾಟಿ ಬೀಸಿದ್ದಾರೆ.

ಇದುವರೆಗೂ ಎಸಿಬಿ ಹಾಕಿರುವ ಬಿ ರಿಪೋರ್ಟ್ಗಳ ಬಗ್ಗೆ ಸಹಿಯಿಲ್ಲದ ಅಪೂರ್ಣ ಮಾಹಿತಿ ನೀಡಿದ ಎಸಿಬಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪರ್ಸನಲ್ ಅಸಿಸ್ಟೆಂಟ್ ಮಹೇಶ್ ಮೂಲಕ ಡೀಲ್ ಮಾಡಿದ್ದಾರೆ. ಮಹೇಶ್ ನೇಮಕಾತಿ ಆದೇಶ ಎಲ್ಲಿದೆ ತೋರಿಸಿ. ಹಣ ಮಾಡುವ ಸಲುವಾಗಿಯೇ ಅವರನ್ನು ಸೇರಿಸಿಕೊಂಡಿದ್ದಾರೆ. ಸಾಕ್ಷ್ಯ ಸಿಕ್ಕಿದ ಬಳಿಕ ಅರೆಸ್ಟ್ ಮಾಡ್ಬೇಕು ಅಲ್ವಾ? ನಾವು ಹೇಳುವ ತನಕ ಏನ್ ಮಾಡ್ತಾ ಇದ್ರಿ..? ನೀವು ಅರೆಸ್ಟ್ ಮಾಡದೇ ಇದ್ದದ್ದಕ್ಕೆ ನಮಗೆ ಕೋಪ ಬಂತು ಎಂದಿದ್ದಾರೆ. 

ನನಗೆ ನಿಮ್ಮ ಎಡಿಜಿಪಿ ಬಗ್ಗೆ ವೈಯಕ್ತಿಕ ದ್ವೇಷ ಏನು ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಎಫ್ಐಆರ್ ರದ್ದು ಕೋರಿ ಐಎಎಸ್ ಮಂಜುನಾಥ್ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ್ದಾರೆ. ಜುಲೈ 11ಕ್ಕೆ ವಿಚಾರಣೆ ಮುಂದೂಡಿದ್ದಾರೆ.

ಇದೇ ವೇಳೆ ಪಿಎಸ್ಐ ಹಗರಣದ ವಿಚಾರಣೆಯನ್ನು ಜುಲೈ 14ಕ್ಕೆ ಮುಂದೂಡಿದ್ದಾರೆ. ಇನ್ನು ತಮ್ಮನ್ನು ಟೀಕೆ ಮಾಡದಂತೆ ನಿರ್ಭಂದ ಕೋರಿ ಎಸಿಬಿ ಎಡಿಜಿಪಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಸರ್ವಿಸ್ ರೆಕಾರ್ಡ್ ಕೇಳಿರುವ ಹೈಕೋರ್ಟ್ ಆದೇಶ ರದ್ದುಪಡಿಸಬೇಕು ಎಂದು ರಿಟ್ ಅರ್ಜಿ ಸಲ್ಲಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಕ್ರೀದ್ ಆಚರಣೆ : ಸರ್ಕಾರದ ಮಾರ್ಗಸೂಚಿಯಲ್ಲೇನಿದೆ?