ಬೆಂಗಳೂರು: ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಆರೋಪದಡಿ ವಿವಿಧ ಸರ್ಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 15 ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 68 ಸ್ಥಳಗಳಲ್ಲಿ 503 ಅಧಿಕಾರಿಗಳು ಹಾಗೂ ಸಿಬ್ಬಂದಿಯ 68 ತಂಡಗಳು ದಾಳಿ ಮಾಡಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ ಹಾಗೂ ಆಸ್ತಿ ಪತ್ರ ಸೇರಿದಂತೆ ಇನ್ನಿತರ ಮಹತ್ವದ ದಾಖಲಾತಿ ಜಪ್ತಿ ಮಾಡಿ ದಾಳಿ ಮುಕ್ತಾಯಗೊಳಿಸಿದ್ದಾರೆ.
ಎಂ.ಬಿರಾದರ್ ಗೆ ಕಲಬುರಗಿಯಲ್ಲಿ 2 ವಾಸದ ಮನೆಗಳು, ಬೆಂಗಳೂರು ನಗರದಲ್ಲಿ 1 ನಿವೇಶನ, 3 ವಿವಿಧ ಕಂಪನಿಯ ಕಾರುಗಳು, 54,50 ಲಕ್ಷ ರೂ. ನಗದು ಹಣ ಪತ್ತೆಯಾಗಿದೆ. ಟಿ.ಎಸ್ ರುದ್ರೇಶಪ್ಪ ಮನೆಯಲ್ಲಿ ವಿವಿಧ ಕಡೆಗಳಲ್ಲಿ 4 ನಿವೇಶನಗಳ ದಾಖಲೆ, 9 ಕೆ.ಜಿ 400 ಗ್ರಾಂ ಚಿನ್ನದ ಬಿಸ್ಕೆಟ್ ಹಾಗೂ ಆಭರಣಗಳು, 3 ಕೆ.ಜಿ ಬೆಳ್ಳಿ ವಸ್ತುಗಳು ಪತ್ತೆಯಾಗಿವೆ. ಕೆ. ಶ್ರೀನಿವಾಸ್ ಮನೆಯಲ್ಲಿ ಕೆ.ಆರ್. ಪೇಟೆ, ಮಂಡ್ಯಮೈಸೂರು ನಗರದಲ್ಲಿ 1 ವಾಸದ ಮನೆ, ಮೈಸೂರು ನಗರದಲ್ಲಿ 1 ಫ್ಲ್ಯಾಟ್, 2 ನಿವೇಶನ, ಮೈಸೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ 4 ಎಕರೆ 34 ಗುಂಟೆ ಕೃಷಿ ಜಮೀನು, ನಂಜನಗೂಡಿನಲ್ಲಿ 1 ಫಾರ್ಮ್ ಹೌಸ್, 1 ಕೆಜಿ ಚಿನ್ನ ಪತ್ತೆಯಾಗಿದೆ.
ಸಕಾಲ ಮಿಷನ್
ಆಡಳಿತಾಧಿಕಾರಿ ನಾಗರಾಜ್ ಮನೆಯಲಿ ಬೆಂಗಳೂರು ನಗರದಲ್ಲಿ 1 ವಾಸದ ಮನೆ ಹಾಗೂ ನಿವೇಶನ, ನೆಲಮಂಗಲದ 1 ವಾಸದ ಮನೆ ನೆಲಮಂಗಲ ತಾಲೂಕಿನಲ್ಲಿ ಸುಮಾರು 11 ಎಕರೆ 25 ಗುಂಟೆ ಜಮೀನು, ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶದ ಒಂದು ಕಟ್ಟಡ, 3 ವಿವಿಧ ಕಂಪನಿಯ ಕಾರುಗಳು, 1,76 ಕೆ.ಜಿ.ಗ್ರಾಂ ಚಿನ್ನಾಭರಣ, 7 ಕೆಜಿ 284 ಗ್ರಾಂ ಬೆಳ್ಳಿ, 43 ಲಕ್ಷ ನಗದು ಪತ್ತೆಯಾಗಿದೆ. ಮಾಯಣ್ಣ ಮನೆಯಲ್ಲಿ ಬೆಂಗಳೂರು ನಗರದಲ್ಲಿ 4 ವಾಸದ ಮನೆಗಳು, ವಿವಿಧ ಕಡೆಗಳಲ್ಲಿ 6 ನಿವೇಶನಗಳು, 2 ಎಕರೆ ಕೃಷಿ ಜಮೀನು ದಾಖಲೆ ಸಿಕ್ಕಿವೆ.