Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪಕ್ಷ ಕಟ್ಟಿದವರೇ ಇಲ್ಲಿ ಎದುರಾಳಿಗಳು

ಪಕ್ಷ ಕಟ್ಟಿದವರೇ ಇಲ್ಲಿ ಎದುರಾಳಿಗಳು
ಚಾಮರಾಜನಗರ , ಬುಧವಾರ, 20 ಮಾರ್ಚ್ 2019 (18:01 IST)
ಚುನಾವಣೆ ರಣ ಕಣ ಕಾವೇರಿತ್ತಿರುವಂತೆ ಹಲವು ವಿಶೇಷತೆಗಳು ಕಣದಲ್ಲಿ ಗಮನ ಸೆಳೆಯುತ್ತಿವೆ. ಈ ಹಿಂದೆ ಜತೆ ಜತೆಯಾಗಿ ಪಕ್ಷ ಸಂಘಟನೆ ಮಾಡಿದವರೇ ಇಲ್ಲಿ ಇದೀಗ ಪರಸ್ಪರ ಎದುರಾಳಿಗಳಾಗಿದ್ದಾರೆ.

ನಾನು ಸಂತೆಮರಹಳ್ಳಿ ಶಾಸಕನಾದಾಗ ಪ್ರಸಾದ್ ಜೆಡಿಎಸ್ ನಲ್ಲಿದ್ದರು. ನನಗೆ ರಾಜಕೀಯ ಗುರು ದಿವಗಂತ ರಾಜಶೇಖರ ಮೂರ್ತಿ. ನಾನು ಒಂದೋಟಿನಲ್ಲಿ ಗೆದ್ದು ಬಂದಾಗ ಜಿಲ್ಲೆಯಲ್ಲಿದ್ದ ಶಾಸಕ ನಾನೊಬ್ಬನೆ ಆಗಿದ್ದೆ ಅಂತ ಕೊಳ್ಳೇಗಾಲದಲ್ಲಿ ಸಂಸದ ಆರ್. ಧ್ರುವನಾರಾಯಣ್ ಹೇಳಿಕೆ ನೀಡಿದ್ದಾರೆ.

ಅಂದಿನಿಂದ ಇಲ್ಲಿವರೆಗೂ ಪಕ್ಷದ ಬೆಳವಣಿಗೆ, ಸಂಘಟನೆ ಮಾಡಿದ್ದೇನೆ. ನಾನು ಕಾಂಗ್ರೆಸ್ ನಲ್ಲಿದ್ದಾಗ ಶ್ರೀನಿವಾಸ್ ಪ್ರಸಾದ್, ಮಹದೇವ ಪ್ರಸಾದ್ ಎಲ್ಲಾ ಜೆಡಿಎಸ್ ನಲ್ಲಿದ್ರು. ಹಿರಿಯರು ಅಂತ ನಮ್ಮ ಪಕ್ಷ ಸೇರಿದ ಮೇಲೆ ಗೌರವದಿಂದ ಕಾಣ್ತಿದ್ವಿ. ಶ್ರೀನಿವಾಸ್ ಪ್ರಸಾದ್ ಹಿರಿಯರು ಅವರ ಬಗ್ಗೆ ನನಗೆ ಗೌರವಿದೆ. ಅವರು ಕಾಂಗ್ರೆಸ್ ಬಿಟ್ಟು ಹೋಗುವಾಗ ಕೊನೆವರೆಗೂ  ಅವರ ಜೊತೆಯಲ್ಲಿದ್ದೆ. ಇವಾಗ ಪರಸ್ಪರ ಸ್ಪರ್ಧೆಗೆ ಇಳಿದಿದ್ದೇವೆ. ಈ ಚುನಾವಣೆಯಲ್ಲಿ ಗೆಲ್ಲುವ ಎಲ್ಲಾ ವಿಶ್ವಾಸವಿದೆ.

webdunia
ಜನರು ನಾನು ಮಾಡಿರುವ ಅಭಿವೃದ್ಧಿ ಕೆಲಸ ನೋಡಿ ಮತ ನೀಡ್ತಾರೆ ಅಂತ ಚಾಮರಾಜನಗರದ ಸಂಸದರಾಗಿರುವ ಧ್ರುವನಾರಾಯಣ್ ಹೇಳಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ-ಜೆಡಿಎಸ್ ಟಿಕೆಟ್ ಬೇಡ ಎಂದ ಕೈ ಮುಖಂಡ?