Webdunia - Bharat's app for daily news and videos

Install App

ಹೆಬ್ಬಾಳ ಏರ್ಪೋರ್ಟ್ ರಸ್ತೆ ಹೊಸ ರೂಲ್ಸ್

Webdunia
ಶುಕ್ರವಾರ, 8 ಜುಲೈ 2022 (16:05 IST)
ಈಶಾನ್ಯ ವಿಭಾಗ ಸಂಚಾರ ಡಿಸಿಪಿ ಸವಿತಾ ಈ ಕುರಿತಾಗಿ ಹೇಳಿಕೆ ನೀಡಿದ್ದು, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಇಂದಿನಿಂದ ಕೆಲ ಡೈವರ್ಷನ್ ಮಾಡಲಾಗಿದೆ. ಏರ್ ಪೋರ್ಟ್ ಕಡೆಯಿಂದ ಬರುವರು ನೇರವಾಗಿ ಹೆಬ್ಬಾಳ ಮೇಲ್ಸೇತುವೆ ಹೋಗಬಹುದಾಗಿದೆ.
ಬೆಂಗಳೂರು: ಹೆಬ್ಬಾಳ ಕೆಂಪಾಪುರ ಜಂಕ್ಷನ್​ನಲ್ಲಿ ಇಂದಿನಿಂದ ಹೊಸ ರೂಲ್ಸ್ ಶುರು (New Rules) ಮಾಡಿದ್ದು, ಟ್ರಾಫಿಕ್ ಪೊಲೀಸರ ಹೊಸ ಪ್ರಯತ್ನ ಆರಂಭ ಮಾಡಿದ್ದಾರೆ.
ಏರ್ಪೋರ್ಟ್ ಸರ್ವಿಸ್ ರಸ್ತೆಯಲ್ಲಿ ಬರುವ ಎಲ್ಲಾ ವಾಹನಗಳು ಮೈನ್ ರೋಡ್​ಗೆ ಎಂಟ್ರಿಯಾಗದಂತೆ ನಿರ್ಬಂಧ ಹೇರಲಾಗಿದೆ. ಎರಡು ಕಡೆಗಳಲ್ಲಿ ಮೈನ್ ರೋಡ್​ಗೆ ಎಂಟ್ರಿಯಾಗದಂತೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದು, ನೇರವಾಗಿ ಹೆಬ್ಬಾಳ ಫ್ಲೈಓವರ್ ಕೆಳಭಾಗದ ಸಿಗ್ನಲ್​ನಲ್ಲಿ ಎಡ ತಿರುವು ಪಡೆದು ಸಿಟಿಗೆ ಎಂಟ್ರಿಯಾಗಬೇಕಿದೆ. ಟ್ರಾಫಿಕ್ ಕಡಿಮೆ ಮಾಡುವ ನಿಟ್ಟಿನಲ್ಲಿ ಹೊಸ ಪ್ರಯತ್ನಕ್ಕೆ ಪೊಲೀಸರು ಕೈ ಹಾಕಿದ್ದು, ರಸ್ತೆಯಲ್ಲಿ ನಿಂತು ವಾಹನ ಸವಾರರಿಗೆ ರಸ್ತೆ ಡವೈರ್ಸನ್​ ಬಗ್ಗೆ ಟ್ರಾಫಿಕ್ ಪೊಲೀಸರು ಹೇಳುತ್ತಿದ್ದಾರೆ. ಬೆಳಿಗ್ಗೆ ಆರು ಗಂಟೆಯಿಂದಲೇ ಹೊಸ ರೂಲ್ಸ್ ಶುರುವಾಗಿದ್ದು, ಹೆಬ್ಬಾಳ ಕೆಂಪಾಪುರ ಜಂಕ್ಷನ್ ಬೆಂಗಳೂರಿನ ಟ್ರಾಫಿಕ್ ಹಾಟ್ ಸ್ಪಾಟ್​ಗಳಲ್ಲೊಂದಾಗಿದೆ. ಹೊಸ ಪ್ರಯತ್ನದ ಮುಖಾಂತರ ಟ್ರಾಫಿಕ್ ಕಂಟ್ರೋಲ್​ಗೆ ಸಂಚಾರಿ ಪೊಲೀಸರು ಮುಂದಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments