Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೆಂಗಳೂರಿನ ಸರ್ವಜ್ಞನಗರ, ಮಹದೇವಪುರ& ಯಲಹಂಕ ವಿಭಾಗದಲ್ಲಿ ಅಧಿಕಮಳೆ..!

ಬೆಂಗಳೂರಿನ ಸರ್ವಜ್ಞನಗರ, ಮಹದೇವಪುರ& ಯಲಹಂಕ ವಿಭಾಗದಲ್ಲಿ ಅಧಿಕಮಳೆ..!
bangalore , ಸೋಮವಾರ, 5 ಸೆಪ್ಟಂಬರ್ 2022 (20:30 IST)
ಬೆಂಗಳೂರಿನ ಪೂರ್ವ ಸರ್ವಜ್ಞನಗರ & ಮಹದೇವಪುರ, ಯಲಹಂಕ ವಿಭಾಗದಲ್ಲಿ ಅಧಿಕ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿದಸಿದೆ. ಕಳೆದ ರಾತ್ರಿಯಿಡೀ ಮತ್ತು ಇಂದು ಮುಂಜಾನೆವರೆಗೂ ಸುರಿದ ಭಾರಿ ಮಳೆಗೆ ರಸ್ತೆಗಳು & ತಗ್ಗು ಪ್ರದೇಶಗಳು ನೀರಿನಿಂದ ಜಲಾವೃತವಾಗಿ ಜನ & ವಾಹನ ಸವಾರರು ತೀವ್ರವಾಗಿ ತೊಂದರೆ ಅನುಭವಿಸಿದ್ದಾರೆ.‌ ಯಲಹಂಕ ವ್ಯಾಪ್ತಿಯ ಶಿವಕೋಟೆ, ಸೊಂಡೇಕೊಪ್ಪ, ತಾವರೆಕೆರೆಗಳಲ್ಲು ಜೋರು ಮಳೆಯಾಗಿದೆ.
 
ಹವಾಮಾನ ಇಲಾಖೆ ಸ್ಪಷ್ಟಪಡಿಸಿರುವ ಮಳೆ ಪ್ರಮಾಣ 
 
ಮಾರತ್ತಹಳ್ಳಿ-87.5mm ದೊಡ್ಡನಕ್ಕುಂದಿ-70mm ವರ್ತೂರು-83.5mm
ಬೆಳ್ಳಂದೂರು-69.5mm
ಹಾಲನಾಯಕನಹಳ್ಳಿ-74mm
HAL ಏರ್ಪೋರ್ಟ್- 66.5mm
ಬೆಳ್ಳಂದೂರು-69.5mm
 HBR layout *ಚೋಳನಾಯಕನಹಳ್ಳಿ-135mm
ಹಂಪಿನಗರ- 66mm
ಬಂಡಿಕೋಡಿಗೆಹಳ್ಳಿ (ಕೆಐಎ)72.5mm
ದಾಸನಪುರ-67.5mm
ಗಂಟಿಗಾನಹಳ್ಳಿ- 65.5mm
ತಾವರೆಕೆರೆ-135.5mm
ಸೊಂಡೆಕೊಪ್ಪ-79mm
ಸಾತನೂರು-65.5mm
ಸಿಂಗನಾಯಕನಹಳ್ಳಿ-68mm
ಹುಸ್ಕೂರು -70mm ಕಾಚೋಹಳ್ಳಿ-65mm 
ಶಿವಕೋಟೆ-65.5 ಮಿಲಿಮೀಟರ್ ಮಳೆಯಾಗಿದೆ
 
ವರ್ಷದ ವಾಡಿಕೆಯ ಮಳೆ ಈಗಾಗಲೇ ಮುಗಿದಿದೆ. ಸತತವಾಗಿ ಬಿಟ್ಟುಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಬೆಂಗಳೂರು & ಬೆಂಗಳೂರು ಸುತ್ತಾಮುತ್ತಾ ಭಾರಿ‌ಮಳೆಯಾಗುತ್ತಿದೆ. ಅಪಾರ ಪ್ರಮಾಣದ ಆಸ್ತಿಪಾಸ್ತಿ ನಾಶವಾಗ್ತಿದೆ. ಇನ್ನು ಎರಡು ಮೂರು ದಿನ ಬೆಂಗಳೂರು ಸುತ್ತಾಮುತ್ತಾ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರಿ ಮಳೆಯಿಂದ ತುಮಕೂರಿನ ಮನೆಗಳು ಜಲಾವೃತ