ಒಂದೇ ಮಳೆಗೆ ತತ್ತರಿಸಿ ಹೋಗಿರುವ ಬೆಂಗಳೂರು ನಗರದ ಜನತೆಗೆ ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದೆ. ಇವತ್ತೂ ಸಹ ಬೆಂಗಳೂರು ನಗರದಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಿನ್ನೆಯೂ ಸಹ ಲೈಟ್ ರೇನ್ ಎಂದು ಹವಾಮಾನ ಮುನ್ಸೂಚನೆ ಇತ್ತು. ಆದರೆ, ರಾತ್ರಿ ಮಹಾ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹಿಗಾಗಿ, ಇವತ್ತು ಸಹ ಅದೇ ಸೂಚನೆ ಇರುವುದರಿಂದ ಭಾರೀ ಸುರಿಯುವ ಸಾಧ್ಯತೆ ಇದೆ ಹವಾಮಾನ ಇಲಾಖೆ ನಿರ್ದೇಶಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಬಗ್ಗೆ ಬಿಬಿಎಂಪಿ ಆಯುಕ್ತರಿಗೂ ಮಾಹಿತಿ ನೀಡಿದ್ದು, ಮುಂಜಾಗ್ರತೆ ಕೈಗೊಳ್ಳುವಂತೆ ಸೂಚಿಸಿರುವುದಾಗಿ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.
ಇವತ್ತಷ್ಟೇ ಅಲ್ಲ, ಮುಂದಿನ ಮೂರಿ ದಿನಗಳ ಕಾಲ ಬೆಂಗಳೂರಲ್ಲಿ ಮಳೆ ಬೀಳುವ ಕುರಿತಂತೆ ಹವಾಮಾನ ಇಲಾಖೆ ವೆಬ್`ಸೈಟ್`ನಲ್ಲಿ ಉಲ್ಲೇಖಿಸಲಾಗಿದೆ.ಲೈಟ್ ರೇನ್ ಎಂದು ಉಲ್ಲೇಖಿಸಲಾಗಿದ್ದರೂ ಭಾರೀ ಮಳೆ ಸಾಧ್ಯತೆ ದಟ್ಟವಾಗಿದೆ. ಹಾಗೇನಾದರೂ ಆದಲ್ಲಿ ಬೆಂಗಳೂರು ನಗರ ಅಕ್ಷರಶಃ ಮುಳುಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ