ಕಾರವಾರ: ಅರಣ್ಯ ಪ್ರದೇಶದೊಳಗಿನ ಅಪರಾಧ ಚಟುವಟಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವಿಶೇಷವಾಗಿ ತರಬೇತಿಗೊಳಿಸಿದ ಜರ್ಮನ್ ಶೆಫರ್ಡ್ ತಳಿಯ ನಾಯಿಗಳನ್ನು ರಾಜ್ಯದ ಎಲ್ಲ ಅರಣ್ಯ ಪ್ರದೇಶಗಳಲ್ಲಿ ನಿಯೋಜಿಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.
ಈಗಾಗಲೇ ಮೊದಲ ಪ್ರಯೋಗವಾಗಿ ಕಾರವಾರದ ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ವಿಶೇಷ ತರಬೇತಿ ಪಡೆದ 'ಕ್ಲಿಪರ್' ಹೆಸರಿನ ಜರ್ಮನ್ ಶೆಫರ್ಡ್ ನಾಯಿ ಆಗಮಿಸಿದ್ದು, ಕೆಲವೇ ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾಗಲಿದೆ. ಸದ್ಯ ಇದನ್ನು ದಾಂಡೇಲಿಯ ಪಣಸೋಲಿಯಲ್ಲಿ ಇಡಲಾಗಿದೆ. ಈ ಗಂಡು ಶ್ವಾನಕ್ಕೆ ಒಂದು ವರ್ಷ ನಾಲ್ಕು ತಿಂಗಳ ಪ್ರಾಯವಾಗಿದ್ದು, ಅದರ ತರಬೇತುದಾರರು ತುಂಬಾ ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದಾರೆ.
ಅರಣ್ಯದಲ್ಲಿನ ಅಪರಾಧ ಚಟುವಟಿಕೆಗಳ ತಡೆಗೆ ಹಾಗೂ ಕಾಡುಗಳ್ಳರ ಪತ್ತೆ ಮಾಡಲು ಹೂದರಾಬಾದ್ ನಿಂದ ತರಲಾಗಿರುವ ಈ ಕ್ಲಿಪರ್ ಶ್ವಾನಕ್ಕೆ, ಇದಕ್ಕೆ ಗ್ವಾಲಿಯರ್ವನ ರಾಷ್ಟ್ರೀಯ ಶ್ವಾನ ತರಬೇತಿ ಕೇಂದ್ರದಲ್ಲಿ ಒಂಬತ್ತು ತಿಂಗಳ ಕಾಲ ವಿಶೇಷ ತರಬೇತಿ ನೀಡಲಾಗಿದೆ. ಇದರ ನಿರ್ವಹಣೆವಹೊತ್ತುಕೊಂಡಿರುವ ಜಿಲ್ಲೆಯ ಅರಣ್ಯ ರಕ್ಷಕ ವೆಂಕಟೇಶ ಹಾಗೂ ಅರಣ್ಯ ವೀಕ್ಷಕ ಕೃಷ್ಣಕುಮಾರ ಅವರು ಸಹ ಕೇಂದ್ರದಲ್ಲಿ ತರಬೇತಿ ಪಡೆದಿದ್ದಾರೆ.
ಕಾಡುಗಳ್ಳರ ಹಾಗೂ ಬೇಟೆಗಾರರ ಪತ್ತೆಗಾಗಿ ವಿಶೇಷ ತರಬೇತಿ ಪಡೆದ ಶ್ವಾನಗಳು ಈಗಾಗಲೇ ಬಂಡಿಪುರ, ನಾಗರಹೊಳೆ ಹಾಗೂ ಬನ್ನೇರುಘಟ್ಟ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಈ ಶ್ವಾನಕ್ಕೆ ಪ್ರತಿದಿನ ಮುಂಜಾನೆ ಎರಡು ತಾಸು ವ್ಯಾಯಾಮ, ಹತ್ತುಗಂಟೆ ಸುಮಾರಿಗೆ 1.5 ಲೀ. ಹಾಲು, ಎರಡು ಮೊಟ್ಟೆ ಹಾಗೂ ಅನ್ನ, ಸಂಜೆ ಅರ್ಧ ಕೆಜಿ ಮಾಂಸ ಹಾಗೂ ಅನ್ನ ನೀಡಲಾಗುತ್ತದೆ. ಇದರ ನಿರ್ವಹಣಾ ವೆಚ್ಚ ಅರಣ್ಯ ಇಲಾಖೆಯೇ ಭರಿಸುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.