Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆರೋಗ್ಯ ಸಚಿವ ಡಾ ಕೆ ಸುಧಾಕರ್ ತವರು ಕ್ಷೇತ್ರದಲ್ಲೇ ಶ್ರದ್ದಾಂಜಲಿ ವಾಹನಕ್ಕೆ ಶ್ರದ್ದಾಂಜಲಿ

ಆರೋಗ್ಯ ಸಚಿವ ಡಾ ಕೆ ಸುಧಾಕರ್ ತವರು ಕ್ಷೇತ್ರದಲ್ಲೇ ಶ್ರದ್ದಾಂಜಲಿ ವಾಹನಕ್ಕೆ ಶ್ರದ್ದಾಂಜಲಿ
ಚಿಕ್ಕಬಳ್ಳಾಪುರ , ಮಂಗಳವಾರ, 13 ಸೆಪ್ಟಂಬರ್ 2022 (21:20 IST)
ಚಿಕ್ಕಬಳ್ಳಾಪುರದಲ್ಲಿ ಶ್ರದ್ಧಾಂಜಲಿ ವಾಹನಕ್ಕೆ ಅಧಿಕಾರಿಗಳುತಿಲಾಂಜಲಿ ಹಾಡಿದಾರೆ. ಉಳ್ಳವರು ಸತ್ತಾಗ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೆರವಣಿಗೆ ಮಾಡ್ತಾರೆ, ಬಡವರು ಸತ್ತಾಗ ಶವ ಸಾಗಿಸಲು ಹಣವಿಲ್ಲದೆ ಒದ್ದಾಡುವ  ಪರಿಸ್ಥಿತಿಯೂ ಇದೆ ಇದನ್ನ ತಪ್ಪಿಸಲು ಸರ್ಕಾರ ಪ್ರತಿ ತಾಲ್ಲೂಕಿಗೂ  ಉಚಿತ ಶ್ರದ್ದಾಂಜಲಿ ವಾಹನ ಕಲ್ಪಿಸಿತ್ತು ,ಆದರೆ ಸ್ವತಃ ಆರೋಗ್ಯ ಸಚಿವರ ತವರು ಕ್ಷೇತ್ರದ ಜಿಲ್ಲಾ ಕೇಂದ್ರದಲ್ಲಿ  ಅಧಿಕಾರಿಗಳು ಶ್ರದ್ದಾಂಜಲಿ ವಾಹನಕ್ಕೆ ಶ್ರದ್ದಾಂಜಲಿ ಸಲ್ಲಿಸಿ ಬೇಜವಾಬ್ದಾರಿ ಮೆರೆದಿದ್ದಾರೆ .
 
 ಹಲವಾರು ವರ್ಷಗಳಿಂದ ಶ್ರದ್ದಾಂಜಲಿ ವಾಹನ ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿದೆ.ಶ್ರದ್ದಾಂಜಲಿ ವಾಹನ ಇಲ್ಲದೆ ಸಾರ್ವಜನಿಕರು  ಪರದಾಡುತ್ತಿದ್ದಾರೆ.ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಸ್ವತಃ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಪ್ರತಿನಿಧಿಸುವ ಚಿಕ್ಕಬಳ್ಳಾಪುರ ನಗರದ ಜಿಲ್ಲಾಸ್ಪತ್ರೆಯಲ್ಲಿ. ಸರ್ಕಾರಿ ಆಸ್ಪತ್ರೆಗಳಲ್ಲಿ ಅಪಘಾತ ಅನಾರೋಗ್ಯದಿಂದ   ಸತ್ತವರ ಮೃತದೇಹ ಅವರ ಕುಟುಂಭಸ್ಥರಿಗೆ ತಲುಪಿಸಲು ಸರ್ಕಾರ 2019  ರಲ್ಲೇ  ಪ್ರತಿ ತಾಲ್ಲೂಕಿಗೂ ಒಂದೊಂದು  ಶ್ರದ್ದಾಂಜಲಿ ವಾಹನ ಕಲ್ಪಿಸುವಂತೆ ಆದೇಶ ಮಾಡಿದೆ. ಆದರಂತೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ  ಒಂದು ಆಂಬ್ಯುಲೆನ್ಸ್ ನ್ನು ಶ್ರದ್ದಾಂಜಲಿ ವಾಹನ‌ವಾಗಿ ಮಾರ್ಪಾಡಿಸಿ  ನಿಸರ್ಗ ಸ್ವಯಂ ಸೇವಾ ಸಂಸ್ಥೆಗೆ ನಿರ್ವಹಣೆಗೆ ಅಗ್ರಿಮೆಂಟ್ ಮಾಡಿಕೊಂಡಿದ್ರು , ಈ ವಾಹನಕ್ಕೆ‌ ಚಾಲಕನಿಗೆ ಮತ್ತು ಒಬ್ಬ  ಹೆಲ್ಪರ್ ಗೆ ಸಂಬಳ ಕೊಡಲು ನಗರಸಭೆಗೆ ಆದೇಶ ನೀಡಿದ್ದಾರೆ .
 
ನಗರಸಭೆಯ ಅಧಿಕಾರಿಗಳು ಸಂಬಳ ಕೊಡೋದಕ್ಕೆ ನಿರಾಕರಿಸಿದ್ದಕ್ಕೆ ನಿಂತಲ್ಲೇ ವಾಹನ ಕೊಳೆಯುತ್ತಿದೆ .ಇನ್ನೂ ಕಾರ್ನಾಟಕ ಆಂದ್ರ ಗಡಿ ಪ್ರದೇಶದ ಹಳ್ಳಿಗಳಿಗೆ ಮೃತದೇಹ ಕೊಂಡೊಯ್ಯಲು ಸಾರ್ವಜನಿಕರು ಖಾಸಗಿ ಆಂಬ್ಯುಲೆನ್ಸ್ ಗಳಿಗೆ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ ಹೈರಾಣಾಗಿದ್ದಾರೆ , ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಆಂಬ್ಯುಲೆನ್ಸ್ ಚಾಲಕರು ಬಂಡವಾಳ ಮಾಡಿಕೊಂಡು ಮನಬಂದಂತೆ ಹಣ ವಸೂಲಿಗೆ ಇಳಿದಿದ್ದಾರೆ , ಕೇಳಿದಷ್ಟು ಹಣ ಚಾಲಕರ ಜೇಬಿಗೆ ಹೋಗಲಿಲ್ಲ  ಅಂದರೆ ಶವ ಗ್ರಾಮಕ್ಕೆ ಸೇರಲ್ಲ 
ಆದಷ್ಟು ಬೇಗ ನಗರಸಭೆ ಅಧಿಕಾರಿಗಳು ಗಮನ ಹರಿಸಿ ಉಚಿತ ಶ್ರದ್ದಾಂಜಲಿ ವಾಹನ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ .
 

Share this Story:

Follow Webdunia kannada

ಮುಂದಿನ ಸುದ್ದಿ

ಶಿವರಾಮ ಕಾರಂತ್ ಬಡಾವಣೆಯ 63 ಕಟ್ಟಡಗಳು ಸಕ್ರಮ: ಸರ್ವೋಚ್ಛ ನ್ಯಾಯಾಲಯದ ಆದೇಶ