ಬೆಂಗಳೂರು: ಗಣಿ ದಣಿ ಜನಾರ್ಧನ ರೆಡ್ಡಿ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿಸಿದ್ದು ಎಲ್ಲರ ಹುಬ್ಬೇರಿಸಿತ್ತು. 500, 1000 ರೂ.ಗಳ ನೋಟು ನಿಷೇಧವಾಗಿ ದೇಶದಾದ್ಯಂತ ಹಣಕ್ಕಾಗಿ ಹಾಹಾಕಾರವಿದ್ದರೆ, ಬಿಜೆಪಿಯ ಉಚ್ಛಾಟಿತ ನಾಯಕ ಜನಾರ್ಧನ ರೆಡ್ಡಿಗೆ ಹಣ ಎಲ್ಲಿಂದ ಬಂತು ತನಿಖೆ ನಡೆಸುವಂತೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಮದುವೆ ಕಾರ್ಯಕ್ರಮಗಳಿಗೆ ರೆಡ್ಡಿ ನೂರಾರು ಕೋಟಿ ರೂ. ಖರ್ಚು ಮಾಡಿದ್ದಾರೆಂದು ಸುದ್ದಿಯಾಗಿದೆ. ಅಷ್ಟು ಅದ್ದೂರಿಯಾಗಿ ಮಗಳ ಮದುವೆ ಮಾಡಲು ಅವರಿಗೆ ಎಲ್ಲಿಂದ ಹಣ ಬಂತು ಎಂದು ತನಿಖೆಯಾಗಬೇಕು. ಅಲ್ಲದೆ ಈ ಮದುವೆಯಲ್ಲಿ ನಿಮ್ಮ ಪಕ್ಷದ ನಾಯಕರೇ ಭಾಗವಹಿಸಿದ್ದಾರೆ ಎಂದು ಮೂರು ಪುಟಗಳ ಪತ್ರದಲ್ಲಿ ದೇವೇಗೌಡ ಒತ್ತಾಯಿಸಿದ್ದಾರೆ.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ರೆಡ್ಡಿ ಜೈಲು ಸೇರಿದ್ದರಲ್ಲದೆ, ಅವರ ಕೆಲವು ಆಸ್ತಿ ಪಾಸ್ತಿಗಳು ಮುಟ್ಟುಗೋಲು ಹಾಕಲಾಗಿತ್ತು. ಈ ಹಿನ್ನಲೆಯಲ್ಲಿ ಅವರ ಆದಾಯದ ಬಗ್ಗೆ ಸಂಸತ್ತಿನಲ್ಲೂ ವಿಪಕ್ಷಗಳು ಪ್ರಶ್ನಿಸಿದ್ದವು. ಅಲ್ಲದೆ ಪತ್ರದಲ್ಲಿ ದೇವೇಗೌಡ ನೋಟು ನಿಷೇಧದ ಬಗ್ಗೆಯೂ ಅಸಮಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ