Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದ್ರೌಪತಮ್ಮ ಜನ್ಮಾಷ್ಠಮಿ ಬಗ್ಗೆ ಕೇಳಿದ್ದೀರಾ?

ದ್ರೌಪತಮ್ಮ ಜನ್ಮಾಷ್ಠಮಿ ಬಗ್ಗೆ ಕೇಳಿದ್ದೀರಾ?
ಬೆಂಗಳೂರು , ಬುಧವಾರ, 21 ಆಗಸ್ಟ್ 2019 (19:56 IST)
ದ್ರೌಪತಮ್ಮ ಜನ್ಮಾಷ್ಠಮಿಯನ್ನು ಮೆರವಣಿಗೆ ಮೂಲಕ ಆಚರಣೆ ಮಾಡಲಾಯಿತು.

ದ್ರೌಪತಮ್ಮ ದೇವಿ ಜನ್ಮಾಷ್ಠಮಿಯ ಅಂಗವಾಗಿ ಪ್ರವಾಹದಿಂದ ಸಂಕಷ್ಟದಲ್ಲಿರುವ ನೆರೆ ಸಂತ್ರಸ್ತರು ಆದಷ್ಟು ಬೇಗ ಸಹಜ ಸ್ಥಿತಿಯತ್ತ ಮರಳಬೇಕು. ಅವರ  ಜೀವನ ಎಂದಿನಂತೆ ಸುಖವಾಗಿ ನಡೆಸುವಂತಾಗಲಿ ಎಂದು ಅರಿಶಿನ ನೀರಿನ ಜೊತೆ ಪಟ್ಟಣದದ್ಯಂತ ದ್ರೌಪತಮ್ಮ ದೇವಿಯ ಮೆರವಣಿಗೆ ನಡೆಸಿದ್ದಾರೆ.

ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ ವಹ್ನಿಕುಲ ಸಮುದಾಯದವರ ಆರಾಧ್ಯ ದೇವತೆ ದ್ರೌಪತಮ್ಮ ದೇವಿಯ ಜನ್ಮಾಷ್ಠಮಿಯನ್ನು ವಿನೂತನವಾಗಿ ಆಚರಣೆ ಮಾಡಲಾಯಿತು. ಉತ್ತರ ಕರ್ನಾಟಕ, ದಕ್ಷಿಣ ಕನ್ನಡದಲ್ಲಿ ಪ್ರವಾಹದಿಂದ ಆಸ್ತಿ ಪಾಸ್ತಿ ನಷ್ಟವಾಗಿ  ಸಾಕಷ್ಟು ಕುಟುಂಬಗಳು ಬೀದಿ ಪಾಲಾಗಿವೆ.

ಅಂತಹ ಕುಟುಂಬಗಳು ಮತ್ತೆ ಸಹಜ ಸ್ಥಿತಿಯತ್ತ ಮರಳಿ ಜೀವನ ನಡೆಸುವಾಂತಗಲಿ ಎಂದು ವಹ್ನಿಕುಲದ ನೂರಾರು ಜನರು ಆನೇಕಲ್ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅರಿಷಿನದ ನೀರಿನ್ನು ಹೊತ್ತು ದ್ರೌಪತಮ್ಮ ದೇವಿಯ ಮೆರೆವಣಿಗೆ ಮಾಡಿದ್ರು. ಆ ಮೂಲಕ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಆ ಬಾಕ್ಸ್ ಸ್ಫೋಟಗೊಂಡಿದ್ದು ಹೇಗೆ?