ಜನಸಾಮಾನ್ಯರಿಗೆ ಟೋಪಿ ಹಾಕಿದ ಕಂಪನಿಗಳ ಸಾಲಿಗೆ ಈಗ ಸ್ಟಾರ್ ಹೆಲ್ತ್ ಇನ್ಷೂರೆನ್ಸ್ ಕಂಪನಿ ಸೇರಿಕೊಂಡಿದೆ.
ಮಂಡ್ಯ ಜಿಲ್ಲೆಯಲ್ಲಿ ಆರೋಗ್ಯ ವಿಮಾ ಪಾಲಿಸಿಗಳನ್ನು ಮಾಡಿಸಿ ಪಾಲಿಸಿದಾರರ ಆರೋಗ್ಯ ಸಂರಕ್ಷಣೆಗೆ ಹಣ ನೀಡದೇ ವಂಚನೆ ಮಾಡಲಾಗಿದೆ.
ಆ ಮೂಲಕ ಜನಸಾಮಾನ್ಯರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ಚೆನ್ನೈ ಮೂಲದ ಸ್ಟಾರ್ ಹೆಲ್ತ್ ಇನ್ಷೂರೆನ್ಸ್ ಕಂಪನಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಯಾವುದೇ ಆಸ್ಪತ್ರೆಗೆ ಹೋಗಿ ದಾಖಲಾಗಿ ಅವಶ್ಯ ದಾಖಲಾತಿಗಳನ್ನು ನೀಡಿದರೂ ವಿಮಾ ಕಂಪನಿಯು ಆರೋಗ್ಯವಿಮಾ ಪಾಲಿಸಿದಾರರಿಗೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ನೀಡದೇ ವಂಚಿಸುತ್ತಿದೆ. ಆದ್ದರಿಂದ ಸ್ಟಾರ್ ಹೆಲ್ತ್ ಇನ್ಷೂರೆನ್ಸ್ ಕಂಪನಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪಾಲಿಸಿದಾರರಾದ ಜ್ಯೋತಿ ಮತ್ತು ಕೀರ್ತಿಪ್ರಸಾದ್ ಒತ್ತಾಯಿಸಿದ್ದಾರೆ.