ಇಸ್ರೇಲ್ ಮೇಲೆ ಹಮಾಸ್ ದಾಳಿ ವಿಚಾರವಾಗಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.ಇಸ್ರೇಲ್ ಮೇಲೆ ಹಮಾಸ್ ಅವರ ದಾಳಿ ನಡೆಸಿದೆ.ಇತ್ತಿಚೇಗಿನ ವರ್ಷದಲ್ಲಿ ಮದ್ಯಪ್ರಾಚ್ಯದ ಶಾಂತಿ ಕಾಪಾಡಲು ಈ ದಾಳಿ ಭಂಗ ತಂದಿದೆ.ಈ ದಾಳಿ ಅತ್ಯಂತ ಖಂಡನೀಯ.ಸದ್ಯ ಇಸ್ರೆಲ್ ಪ್ರತಿದಾಳಿ ಮಾಡುತ್ತಿದೆ.ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆ ಅಗತ್ಯವಾಗಿದೆ.ಈ ಭಾಗದಲ್ಲಿ ಲಕ್ಷಾಂತರ ಭಾರತೀಯರು ಕೆಲಸ ಮಾಡ್ತಿದ್ದಾರೆ.ಅವರಿಗೂ ಆತಂಕ, ತೊಂದರೆಯಾಗಿದೆ.ಇದನ್ನ ವಿಶ್ವ ಗಂಭೀರವಾಗಿ ತೆಗೆದುಕೊಳ್ಳಬೇಕು.ಅಮಾಯಕರ ಮೇಲೆ ಹಮಾಸ್ ದಾಳಿ ಮಾಡಿದ್ದನ್ನ ಪ್ರಧಾನಿ ಮೋದಿ ಖಂಡಿಸಿದ್ದಾರೆ.ಇದು ಒಳ್ಳೆಯ ನಿರ್ಧಾರ ಎಂದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿಗೆ ಸದಾನಂದ ಗೌಡ ವಿರೋದ ವಿಚಾರವಾಗಿ ಮಾಜಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು,ಒಟ್ಟಿಗೆ ಕೆಲಸ ಮಾಡಬೇಕಂದಾಗ ಕೆಲವು ಸ್ಥಳೀಯ ವಿಚಾರ ಮುನ್ನಲೆಗೆ ಬರುತ್ತೆ.ಈ ವಿಚಾರದಲ್ಲಿ ನಮ್ಮ ನಾಯಕರು ಮಾತಾಡ್ತಾರೆ.ಯಾವುದೇ ಸೀಟು ಹೊಂದಾಣಿಕೆ ಬಗ್ಗೆ ಇನ್ನು ಅಂತಿಮ ಆಗಿಲ್ಲ.ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡೇ ತೀರ್ಮಾನ ಮಾಡ್ತಿವಿ ಅಂತ ವರಿಷ್ಠರು ಹೇಳಿದ್ದಾರೆ.ಎಲ್ಲಾ ಹಿರಿಯ ನಾಯಕರು,ಹಾಗೇ ಯಾರಿಗೆಲ್ಲಾ ತೊಂದರೆಯಾಗಿದೆ,ಯಾವ ಜಿಲ್ಲೆಗಳಲ್ಲಿ ತೊಂದರೆಯಾಗಿದೆಅವರ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಣಯಗಳಾಗುತ್ತೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಯಿ ಹೇಳಿದ್ದಾರೆ.