ಕೆಲವೇ ಹೊತ್ತಲ್ಲಿ ಸ್ವಾಮೀಜಿಯನ್ನ ಕೋರ್ಟ್ ಗೆ ಸಿಸಿಬಿ ಪೊಲೀಸರು ಹಾಜರುಪಡಿಸಲಿದ್ದಾರೆ.ಸದ್ಯ ಮಡಿವಾಳ ಟೆಕ್ನಿಕಲ್ ಸೆಲ್ ನಲ್ಲಿ ಸ್ವಾಮೀಜಿ ಇದ್ದು,ನಿನ್ನೆಯಿಂದ ಸ್ಚಾಮೀಜಿಯನ್ನ ತೀವ್ರ ವಿಚಾರಣೆ ಸಿಸಿಬಿ ನಡೆಸಿದೆ.ಈ ವೇಳೆ ಒಂದೂವರೆ ಕೋಟಿ ಬಗ್ಗೆ ಸ್ವಾಮೀಜಿ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಮೈಸೂರಿನಲ್ಲಿ ವಂಚಿಸಿದ ಹಣ ಇಟ್ಟಿರೋ ಮಾಹಿತಿ ಹೇಳಿದ್ದು,10.30ರ ವೇಳೆಗೆ ಸಿಸಿಬಿ ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ.ಕೋರ್ಟ್ ಗೆ ಹಾಜರುಪಡಿಸಿ ಕಸ್ಟಡಿಗೆ ಸಿಸಿಬಿ ಪಡೆಯಲಿದ್ದಾರೆ.10 ರಿಂದ 14ದಿನಗಳ ಕಾಲ ಕಸ್ಟಡಿಗೆ ಕೇಳೋ ಸಾಧ್ಯತೆ ಇದೆ.ಕಸ್ಟಡಿಗೆ ಪಡೆದ ನಂತರ ಸ್ವಾಮೀಜಿಯನ್ನ ಸ್ಥಳ ಮಹಜರಿಗೆ ಸಿಸಿಬಿ ಕರೆದೊಯ್ಯಲಿದೆ.ಚಂದ್ರಾ ಲೇಔಟ್ ಬಳಿಯ ಮನೆಯೊಂದರಲ್ಲಿ ಸ್ವಾಮೀಜಿ ಹಣ ಪಡೆದಿದ್ದು,ಅಲ್ಲಿಗೆ ಕರೆದೊಯ್ದು ಸ್ಥಳ ಮಹಜರು ಮಾಡಲಿದ್ದಾರೆ.ನಂತರ ಮೈಸೂರಿಗೆ ಕರೆದೊಯ್ಯೋ ಸಾಧ್ಯತೆ ಇದೆ.ಸದ್ಯ ಮಡಿವಾಳ ಟೆಕ್ನಿಕಲ್ ನಲ್ಲಿ ಸ್ವಾಮೀಜಿಯನ್ನ ಸಿಸಿಬಿ ವಿಚಾರಣೆ ನಡೆಸುತ್ತಿದ್ದು,19 ನೇ ಎಸಿಎಮ್ ಎಮ್ ನ್ಯಾಯಲಯಕ್ಕೆ ಸ್ವಾಮಿಜಿಯನ್ನ ಹಾಜರು ಪಡಿಸಲಿದ್ದಾರೆ.