ಪಾಕಿಸ್ತಾನದ ಉಗ್ರಗಾಮಿ ಸಂಘಟನೆಯಾದ ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್, ಬೀದರ್ ನಾಗರಿಕನಿಗೆ ಬೆದರಿಕೆಯೊಡ್ಡಿರುವ ವಿಚಿತ್ರ ಘಟನೆ ವರದಿಯಾಗಿದೆ.
ಕೆಲ ದಿನಗಳ ಹಿಂದೆ ಹಫೀಜ್ ಸಯೀದ್ ಭಾರತದ ವಿರುದ್ಧ ಅಸಭ್ಯ ಹೇಳಿಕೆ ನೀಡಿದ್ದರಿಂದ ಆಕ್ರೋಶಗೊಂಡ ನಗರದ ಬದ್ರುದ್ದೀನ್ ಕಾಲೋನಿಯ ನಿವಾಸಿಯಾದ ಅಲಿಖಾನ್, ಪಾಕಿಸ್ತಾನ ಮತ್ತು ಹಫೀಜ್ ವಿರುದ್ಧ ಗುಡುಗಿದ್ದರು.ಅಲಿಖಾನ್ ಗುಡುಗಿದ ವಿಡಿಯೋ ವೈರಲ್ ಆಗಿತ್ತು.
ಅಲಿಖಾನ್ ಪುತ್ರ ದುಬೈನಲ್ಲಿ ಉದ್ಯೋಗದಲ್ಲಿದ್ದು, ಇದೀಗ ಆತನಿಗೆ ಹಫೀಜ್ ಬೆಂಬಲಿಗರು ಕರೆ ಮಾಡಿ ಜೀವ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ತಂದೆ ಅಲಿಖಾನ್ ಮಾಹಿತಿ ನೀಡಿದ್ದಾರೆ.
ಕರೆ ಹಾಗೂ ವಾಟ್ಸ್'ಆಪ್ ಸಂದೇಶ ಕಳುಹಿಸಿರುವ ಪಾಕ್ ವಲಸಿಗರು 'ನಿಮ್ಮ ತಂದೆ ಹಫೀಜ್ ವಿರುದ್ಧ ಮಾತನಾಡಿದ್ದಾರೆ, ನೀನು ಸಾಯಬೇಕಾಗುತ್ತದೆ.' ಎಂದು ಜೀವ ಬೆದರಿಕೆಯೊಡ್ಡಿದ್ದಾರೆ. ಇದರಿಂದ ಆತಂಕಗೊಂಡಿರುವ ಅಲಿಖಾನ್ ತನ್ನ ಮಗನನ್ನು ರಕ್ಷಿಸುವಂತೆ ಜಿಲ್ಲಾ ವರಿಷ್ಠಾಧಿಕಾರಿಯ ಮೊರೆ ಹೋಗಿದ್ದಾರೆ.
ನಿನ್ನ ತಂದೆ ಜಮಾತ್ ಉದ್ ದಾವಾ ಸಂಘಟನೆ ಮುಖ್ಯಸ್ಥ ಹಫೀಜ್ ವಿರುದ್ಧ ಹೇಳಿಕೆ ನೀಡಿದ್ದರಿಂದ ನೀನು ಅದಕ್ಕೆ ಜೀವ ತೆರಬೇಕಾಗುತ್ತದೆ ಎಂದು ಪಾಕಿಸ್ತಾನದಿಂದ ಬೆದರಿಕೆ ಕರೆಗಳು ಬರುತ್ತಿವೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ