9 ದಿನಗಳಿಂದ ರಾಜ್ಯದಲ್ಲಿ ಬಿಡು ಬಿಟ್ಟಿರುವ ಗುಜರಾತ್ ಕಾಂಗ್ರೆಸ್ ಶಾಸಕರು ಿಂದು ರಾತ್ರಿ ಗುಜರಾತ್`ಗೆ ವಾಪಸ್ ಆಗಲಿದ್ದಾರೆ. ಇಂಡಿಗೋ ಫ್ಲೈಟ್ ಮೂಲಕ ಗುಜರಾತ್`ಗೆ ತೆರಳುತ್ತಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ಕುದುರೆ ವ್ಯಾಪಾರದ ಭಯದಿಂದ ಶಾಸಕರು ಬೆಂಗಳೂರಿಗೆ ದೌಡಾಯಿಸಿದ್ದರು. ಅವರಿಗೆ ಆಶ್ರಯ ನೀಡಿದ್ದ ಡಿ.ಕೆ. ಶಿವಕುಮಾರ್ ಮನೆ ಮೇಲೆ ಐಟಿ ದಾಳಿಯೂ ನಡೆದು ಹೋಯ್ತು. ಈ ಎಲ್ಲ ಪ್ರಹಸನದ ಬಳಿಕ ಗುಜರಾತ್ ಶಾಸಕರು ತವರಿಗೆ ವಾಪಸ್ ಆಗುತ್ತಿದ್ದಾರೆ. ಇಂಡಿಗೋ ಫ್ಲೈಟ್ ಬುಕ್ ಆಗಿದ್ದು, ರಾತ್ರಿ ಅಥವಾ ಬೆಳಗಿನ ಜಾವ ತೆರಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಡಿ.ಕೆ. ಶಿವಕುಮಾರ್, ಶಾಸಕರು ಇವತ್ತು ವಾಪಸ್ ಆಗುತ್ತಿದ್ದಾರೆ. ಅವರನ್ನ ಕಳುಹಿಸಲು ರೆಸಾರ್ಟ್`ಗೆ ಹೋಗಬೇಕಿದೆ. ಸಾಧ್ಯವಾದರೆ ಗುಜರಾತ್`ಗೆ ತೆರಳುತ್ತೇನೆ ಎಂದಿದ್ದಾರೆ. ಈಟಿ ಇಲಾಖೆ ಸಮನ್ಸ್ ನೀಡಿದ್ದು, ಕರೆದಾಗ ಹೋಗಿ ಬರುತ್ತೇನೆ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ