ಬೆಂಗಳೂರು: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಎದುರು ನಿಲ್ಲುವಂತಹ ಪ್ರಬಲ ನಾಯಕ ಮತ್ತೊಬ್ಬರಿಲ್ಲ ಎನ್ನುವ ಮೂಲಕ ಜೆಡಿಎಸ್ ಶಾಸಕ, ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಅಚ್ಚರಿ ಮೂಡಿಸಿದ್ದಾರೆ.
ಒಂದೆಡೆ ಜೆಡಿಎಸ್ ದೇಶದಲ್ಲಿ ಮೋದಿ ನೇತೃತ್ವದ ಬಿಜೆಪಿಗೆ ಪರ್ಯಾಯ ಶಕ್ತಿಯನ್ನು ಹುಟ್ಟುಹಾಕುವುದಕ್ಕೆ ಬೆಂಬಲಿಸುತ್ತಿದ್ದರೆ, ಜಿಟಿ ದೇವೇಗೌಡರು ಮೋದಿಯನ್ನು ಪ್ರಬಲ ನಾಯಕ ಎಂದಿದ್ದು ಅಚ್ಚರಿ ಮೂಡಿಸಿದೆ.
ಹಾಗಿದ್ದರೂ ಕಳೆದ ನಾಲ್ಕೂವರೆ ವರ್ಷದಲ್ಲಿ ಕೇಂದ್ರ ಸರ್ಕಾರದ ಆಡಳಿತ ಗ್ರಾಮೀಣ ಭಾಗವನ್ನು ಸಂಕಷ್ಟಕ್ಕೆ ನೂಕಿದೆ. ಅವರ ಬಗ್ಗೆ ಕೇಂದ್ರ ಕಾಳಜಿ ತೋರಿಲ್ಲ ಎಂದು ಟೀಕಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.