ಬೆಂಗಳೂರು: ಲೋಕಾಯುಕ್ತ ಕಚೇರಿಗೇ ನುಗ್ಗಿ ದುಷ್ಕರ್ಮಿಯೊಬ್ಬ ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿಯವರಿಗೆ ಚೂರಿ ಇರಿದ ಪ್ರಕರಣವಾದ ಮೇಲೆ ರಾಜ್ಯ ಸರ್ಕಾರ ಇಲ್ಲಿನ ಭದ್ರತಾ ಲೋಪ ಸರಿಪಡಿಸಲು ಮುಂದಾಗಿದೆ.
ಲೋಕಾಯುಕ್ತ ಕಚೇರಿ ಸೇರಿದಂತೆ ಪ್ರಮುಖ ಕಚೇರಿಗಳಿಗೆ ಇನ್ನು ಮುಂದೆ ಪಾರ್ಲಿಮೆಂಟ್ ಮಾದರಿ ಭದ್ರತೆ ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಪ್ರಕರಣ ದೊಡ್ಡ ಭದ್ರತಾ ವೈಫಲ್ಯಕ್ಕೆ ಸಾಕ್ಷಿಯಾಗಿರುವುದರಿಂದ ಸರ್ಕಾರ ಟೀಕೆಗೆ ಗುರಿಯಾಗಿದೆ.
ಇಲ್ಲಿ ಮೆಟಲ್ ಡಿಟೆಕ್ಟರ್ ಹಾಳಾಗಿ ತುಂಬಾ ದಿನಗಳೇ ಆಗಿದ್ದರೂ ಸರಿಪಡಿಸಿರಲಿಲ್ಲ. ಇದೀಗ ಚೂರಿ ಇರಿತ ಪ್ರಕರಣವಾದ ನಂತರ ಎಚ್ಚೆತ್ತ ಸರ್ಕಾರ ಕೂಡಲೇ ಇದನ್ನು ಸರಿಪಡಿಸಲು ಮುಂದಾಗಿದೆ. ಅಂತೂ ಎಚ್ಚೆತ್ತುಕೊಳ್ಳಬೇಕಾದರೆ ಇಂತಹ ಘಟನೆಗಳೇ ನಡೆಯಬೇಕಾಗುವುದು ವಿಪರ್ಯಾಸವೇ ಸರಿ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ