ಕೇಂದ್ರ ಸರಕಾರ ಹಿಂದೂಗಳ ಮತಕ್ಕಾಗಿ ಗೋಹತ್ಯೆ ನಿಷೇಧ ಜಾರಿಗೊಳಿಸಿದೆ. ತಾಕತ್ತಿದ್ರೆ ದೇಶಾದ್ಯಂತ ಗೋಮಾಂಸ ರಫ್ತಿಗೆ ನಿಷೇಧ ಹೇರಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸವಾಲ್ ಹಾಕಿದ್ದಾರೆ.
ಗೋವುಗಳ ಬಗ್ಗೆ ನಮಗೂ ಪೂಜ್ಯ ಭಾವನೆಯಿದೆ. ದೀಪಾವಳಿ ,ಸಂಕ್ರಾಂತಿ ಹಬ್ಬದಂದು ನಾವು ಗೋವುಗಳ ಪೂಜೆ ಮಾಡ್ತೇವೆ. ಆದರೆ, ವಯಸ್ಸಾದ ಮೇಲೆ ಗೋವುಗಳ ಜವಾಬ್ದಾರಿ ಯಾರು ಹೊರುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಗೋಹತ್ಯೆ ನಿಷೇಧ ಬೆಂಬಲಿಸುವವರು ವಯಸ್ಸಾದ ಗೋವುಗಳ ರಕ್ಷಣಾ ಜವಾಬ್ದಾರಿ ಹೊರಬೇಕು. ಹಳ್ಳಿ ಹಳ್ಳಿಗಳಲ್ಲಿ ಗೋರಕ್ಷಣಾ ಕೇಂದ್ರಗಳನ್ನು ತೆಗೆಯಬೇಕು. ಕೇವಲ ಗೋಹತ್ಯೆನಿಷೇಧ ಆದೇಶ ಹೊರಡಿಸುವುದರಿಂದ ಸಮಸ್ಯೆಗೆ ಪರಿಹಾರ ದೊರಕಿಸಿದಂತೆ ಅಲ್ಲ. ಕೇಂದ್ರ ಸರಕಾರ ಪರ್ಯಾಯ ಮಾರ್ಗವನ್ನು ತೋರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಎಂಇಎಸ್ ಪ್ರತಿನಿತ್ಯ ಕ್ಯಾತೆ ತೆಗೆಯುತ್ತಿದೆ. ರಾಜ್ಯ ಸರಕಾರಕ್ಕೆ ಎಂಇಎಸ್ ನಾಯಕರ ಪುಂಡಾಟಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಕನ್ನಡ ನಾಡಿನಲ್ಲಿಯೇ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಜಿಪಿಯವರ ಬರ ಅಧ್ಯಯನಪ್ರವಾಸ ರಾಜಕೀಯದ ಒಂದು ಭಾಗ. ಬರ ಅಧ್ಯಯನಕ್ಕಾಗಿ ಪ್ರವಾಸ ಹಮ್ಮಿಕೊಂಡಿದ್ದಾರೆಯೋ ಎನ್ನುವುದನ್ನು ಬಿಜೆಪಿ ನಾಯಕರು ಸ್ಪಷ್ಟಪಡಿಸಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.