ವಿದೇಶ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೇಶಕ್ಕೆ ಮರಳಿ ಬಂದ ಮೇಲೆ ರಾಜ್ಯದ ಸಮ್ಮಿಶ್ರ ಸರಕಾರದ ಅಳಿವು-ಉಳಿವು ನಿರ್ಧಾರವಾಗಲಿದೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ.
ಅಧಿಕಾರಕ್ಕಾಗಿ ರಾಜಕೀಯ ಆಟ ಮುಂದುವರಿದಿರುವಂತೆ ದಿನಕ್ಕೊಂದು ಮಾತುಗಳು ಕೇಳಿಬರುತ್ತಿವೆ. ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬೆಂಗಳೂರಿಗೆ ಆಗಮಿಸಿದ ಬಳಿಕ ಏನೆಲ್ಲ ಬೆಳವಣಿಗೆಗಳು ಆಗಬಹುದೆಂದು ಚರ್ಚೆಗಳು ನಡೆಯುತ್ತಿವೆ.
ಜಾರಕಿಹೊಳಿ ಸಹೋದರರ ಅಸಮಧಾನವನ್ನು ತೊಡೆದು ಸರಕಾರವನ್ನು ಸುಸ್ಥಿತಿಗೆ ತರುತ್ತಾರೋ ಅಥವಾ ಸರಕಾರ ಅಸ್ಥಿರವಾಗುವ ಚಟುವಟಿಕೆಗಳನ್ನು ಪರೋಕ್ಷವಾಗಿ ಪ್ರೋತ್ಸಾಹ ಮಾಡುತ್ತಾರೋ ಎಂಬುದು ಸಧ್ಯದ ಕುತೂಹಲವಾಗಿದೆ.