ರಾಜ್ಯ ಸರಕಾರ 7ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆಯನ್ನು ಪ್ರಸಕ್ತ ವರ್ಷದಿಂದಲೇ ಆರಂಭಿಸಲು ಸಿದ್ಧತೆ ಮಾಡಿಕೊಂಡಿದೆ.
ಈ ಹಿಂದೆ ಏಳನೇ ತರಗತಿ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ಜಾರಿಯಲ್ಲಿತ್ತು. ಗುಣಮಟ್ಟದ ಶಿಕ್ಷಣದ ಆಶಯದೊಂದಿಗೆ ಮತ್ತೆ ಈ ಸಲದಿಂದ ಪಬ್ಲಿಕ್ ಪರೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ. ಹೀಗಂತ ಶಿಕ್ಷಣ ಸಚಿವ ಸುರೇಶ್ ಕುಮಾರ ಹೇಳಿದ್ದಾರೆ.
1 ರಿಂದ 10 ನೇ ತರಗತಿ ವರೆಗೆ ಮಕ್ಕಳಿಗೆ ಫೇಲ್ ಮಾಡಬಾರದು ಅನ್ನೋ ನಿಯಮವನ್ನು ಸಹ ಸರಕಾರ ಬದಲಾವಣೆ ಮಾಡಿದೆ. 7ನೇ ತರಗತಿ ಮಕ್ಕಳಿಗೆ ಮಾರ್ಚ್ ನಲ್ಲಿ ಪಬ್ಲಿಕ್ ಎಕ್ಸಾಮ್ ನಡೆಯಲಿವೆ ಎಂದಿದ್ದಾರೆ.