ಪೊಲೀಸ್ ದಾಳಿ ವೇಳೆ ಮನೆಯಲ್ಲಿ ಕೋಟಿ ಕೋಟಿ ನಿಷೇಧಿತ ನೋಟು ಪತ್ತೆಯಾಗಿ ಬಂಧನಕ್ಕೀಡಾಗಿದ್ದ ರೌಡಿ ಶೀಟರ್ ನಾಗರಾಜ್ ಮತ್ತು ಮಕ್ಕಳಾದ ಶಾಸ್ತ್ರೀ, ಗಾಂಧಿಗೆ ಜಾಮೀನು ಮಂಜೂರಾಗಿದೆ.
7 ಪ್ರಕರಣಗಳಲ್ಲಿ 2 ಲಕ್ಷ ರೂ. ಬಾಂಡ್ ಪಡೆದು ಹೈಕೋರ್ಟ್ ಏಕಸದಸ್ಯ ಪೀಠ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಪ್ರತೀ ಗುರುವಾರ ಮೂವರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ತೆರಳಿ ಸಹಿ ಹಾಕಬೇಕು, ಸಾಕ್ಷಿ ನಾಶಕ್ಕೆ ಯತ್ನಿಸಬಾರದು ಎಂಬ ಷರತ್ತು ವಿಧಿಸಲಾಗಿದೆ. ಈಗಾಗಲೇ ವಿಚಾರಣೆ ಮುಗಿದಿರುವುದರ ಜೊತೆಗೆ ಇಂತಹದ್ದೇ ಪ್ರಕರಣಗಳಲ್ಲಿ ಜಾಮೀನು ಸಿಕ್ಕಿರುವ ಬಗ್ಗೆ ವಕೀಲರು ಕೋರ್ಟ್ ಮುಂದೆ ವಾದಿಸಿದ್ದಾರೆ. ಅಲ್ಲದೆ, ಐಟಿ ಇಲಾಖೆ ದಾಖಲಿಸಬೇಕಿದ್ದ ಪ್ರಕರಣಗಳನ್ನ ಪೊಲೀಸರು ದಾಖಲಿಸಿರುವುದು ಸರಿಯಲ್ಲ ಎಂದು ವಕೀಲರು ವಾದಿಸಿದ್ದು ಜಾಮೀನು ನೀಡಲು ಪ್ರಮುಖ ಕಾರಣ ಎಂದು ತಿಳಿದು ಬಂದಿದೆ.
ಏಪ್ರಿಲ್ 14ರಂದು ನಾಗರಾಜ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ ಸಂದರ್ಭ 500, 1000 ಮುಖಬೆಲೆಯ ನಿಷೇದಿತ ನೋಟುಗಳು ಪತ್ತೆಯಾಗಿದ್ದವು. ಅಂದು ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದ ನಾಗನನ್ನ 27 ದಿನಗಳ ಬಳಿಕ ತಮಿಳುನಾಡಿನ ಅರ್ಕಾಟ್`ನಲ್ಲಿ ಬಂಧಿಸಲಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ