ಮೂಗು ಮಾಡಿದವರಿಗಿಂತ ಮೂಗುತಿ ಮಾಡಿದವರನ್ನೇ ಹೆಚ್ಚು ಸ್ಮರಿಸಿದ್ರಂತೆ. ಹಾಗಾಗಿದೆ ಹುಬ್ಬಳ್ಳಿ ಏರ್ ಪೋರ್ಟ್ ಗೆ ಭೂಮಿ ನೀಡಿದ್ದ ಸಂತ್ರಸ್ತರ ರೈತರ ಸ್ಥಿತಿ. ಭೂಮಿ ಕೊಟ್ಟು 10 ವರ್ಷವಾದ್ರೂ ಸಂತ್ರಸ್ತರಿಗೆ ಸರಿಯಾದ ಪರಿಹಾರ ಇರಲಿ, ಒಂದು ಪುನರ್ವಸತಿ ಕಲ್ಪಿಸೋದಕ್ಕೂ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಇದರ ಮಧ್ಯೆ ನಾವು ಏರ್ ಪೋರ್ಟ್ ಗೆ ಅದನ್ನ ಮಾಡಿದ್ದೇವೆ ಈ ರೀತಿ ಕಡೆದು ಕಟ್ಟೆ ಹಾಕಿದ್ದೇವೆ ಅಂತ ರಾಜಕಾರಣಿಗಳು ಕ್ರೆಡಿಟ್ ಪಡೆಯಲು ಸರ್ಕಸ್ ಮಾಡ್ತಿದಾರೆ.
ಹುಬ್ಬಳ್ಳಿ ಏರ್ ಪೋರ್ಟ್ ಗೆ ಅಂತಾರಾಷ್ಟ್ರೀಯ ಮಾನ್ಯತೆ ಸಿಗುತ್ತೆ ಅಂದಾಗ ಈ ಭಾಗದ ಜನ ಖುಷಿ ಪಟ್ರು. ಆದ್ರೇ, ಅದಕ್ಕೆ ಬೇಕಾದ ಜಾಗವನ್ನ ಇಲ್ಲಿರೋ ರೈತರು, ಕೂಲಿ ಕಾರ್ಮಿಕರು, ನಿವೃತ್ತ ಸರ್ಕಾರಿ ನೌಕರರು ನೀಡಿದ್ರು. ಅವರನ್ನೇ ಸರ್ಕಾರ ಸಂಪೂರ್ಣ ಮರೆತಿದೆ.
.ಹುಬ್ಬಳ್ಳಿಯಲ್ಲೀಗ ಅಂತಾರಾಷ್ಟ್ರೀಯ ದರ್ಜೆಯ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಈ ಭಾಗದ ಅಭಿವೃದ್ಧಿಗಿದು ವರದಾನವಾಗುತ್ತೆ ಅನ್ನೋದರಲ್ಲಿ ಡೌಟೇ ಇಲ್ಲ. 1000 ಎಕರೆಗೂ ಹೆಚ್ಚು ಭೂಮಿಯನ್ನ 10 ವರ್ಷದ ಹಿಂದೆ ವಿಮಾನ ನಿಲ್ದಾಣಕ್ಕಾಗಿ ಭೂಸ್ವಾಧೀನ ಮಾಡ್ಕೊಟ್ಟಿದ್ದ ರೈತರ ಸ್ಥಿತಿ ಅತಂತ್ರವಾಗಿದೆ. ಭೂಸ್ವಾಧೀನ ಮಾಡುವ ವೇಳೆಯೇ 520 ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸೋದಾಗಿ ನಗರಾಭಿವೃದ್ಧಿ ಇಲಾಖೆ ಒಪ್ಪಂದ ಮಾಡ್ಕೊಂಡಿತ್ತು. ಆದ್ರೀಗ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಖಾಲಿ ನಿವೇಶನಗಳಿದ್ರೂ ಅದನ್ನ ಸಂತ್ರಸ್ತರಿಗೆ ಹಂಚ್ತಿಲ್ಲ.
10 ವರ್ಷದಿಂದ ಈ ಬಗ್ಗೆ ಸಂತ್ರಸ್ತರ ಹೋರಾಟ ಮಾಡ್ತಾನೇ ಇದಾರೆ. ಜನಪ್ರತಿನಿಧಿಗಳೂ ಈ ಬಗ್ಗೆ ಪ್ರಾಧಿಕಾರಕ್ಕೆ ಮನವಿ ಮಾಡ್ಕೊಂಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. 10 ವರ್ಷದ ಹಿಂದೆ ಬರೀ ಒಂದು ಲಾರಿ ಮರಳಿಗೆ 4 ಸಾವಿರ ರೂಪಾಯಿ ಖರ್ಚಾಗ್ತಾಯಿತ್ತು. ಈಗ ಅದರ ಹತ್ತುಪಟ್ಟು ಅಂದ್ರೇ 40 ಸಾವಿರ ರೂ. ವೆಚ್ಚವಾಗುತ್ತೆ. ಮನೆ ನಿರ್ಮಾಣ ವಸ್ತುಗಳ ಬೆಲೆಯಂತೂ ಕೇಳೋದೇ ಬೇಡ. ಈ ಹಿಂದಿನ ಯಾವುದೇ ಸರ್ಕಾರಗಳು ಸಂತ್ರಸ್ತರ ನೆರವಿಗೆ ಬಂದಿಲ್ಲ. ಈಗಿರೋ ಮೈತ್ರಿ ಸರ್ಕಾರವಾದ್ರೂ ಸಂತ್ರಸ್ತರ ನೆರವಿಗೆ ಬರುತ್ತಾ ಅನ್ನೋ ನಿರೀಕ್ಷೆ ಹುಬ್ಬಳ್ಳಿ ವಿಮಾನ ನಿಲ್ದಾಣ ಸಂತ್ರಸ್ತರ ಒಕ್ಕೂಟ ದ ಅಧ್ಯಕ್ಷ, ರಘೋತ್ತಮ ಕುಲಕರ್ಣಿ ಹಾಗೂ ಸದಸ್ಯರದ್ದಾಗಿದೆ.