Select Your Language

Notifications

webdunia
webdunia
webdunia
webdunia

ಸರ್ಕಾರದ ವಿರುದ್ದ ಕಿಡಿ ಕಾರುತ್ತಿರುವ ಸರ್ಕಾರಿ ನೌಕರರು

ಸರ್ಕಾರದ ವಿರುದ್ದ ಕಿಡಿ ಕಾರುತ್ತಿರುವ ಸರ್ಕಾರಿ ನೌಕರರು
bangalore , ಸೋಮವಾರ, 19 ಡಿಸೆಂಬರ್ 2022 (19:26 IST)
ಅವರೆಲ್ಲ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡೋ ನೌಕರರು. ರಿಟೈರ್ಡ್ ಆದ್ಮೇಲೆ ಪಿಂಚಣಿ ಯೋಜನೆ ಇದೆ ಅಂತ ಖುಷಿ ಪಟ್ಟವರು. ಆದ್ರೆ ಸರ್ಕಾರ ಹಳೆ ಪಿಂಚಣಿ ವ್ಯವಸ್ಥೆಯನ್ನ ತೆಗೆದುಹಾಕಿ ಎನ್‌ಸಿಎಸ್ ಅನ್ನು ಜಾರಿ ಮಾಡಿದೆ. ಹೀಗಾಗಿ ಇವತ್ತು ರಾಜ್ಯ ಸರ್ಕಾರಿ ನೌಕರರು ರಾಜಧಾನಿಯಲ್ಲಿ ಪ್ರತಿಭಟನೆಯ ಕಿಚ್ಚನ ಹಾಯಿಸಿದ್ರು.ರಾಷ್ಟ್ರೀಯ ಪಿಂಚಣಿಯ ಹೊಸ ಯೋಜನೆಯ ರದ್ದು ಮಾಡಿ ಹಳೆ ಪಿಂಚಣಿಯನ್ನು ಜಾರಿ ಮಾಡುವಂತೆ ಒತ್ತಾಯಿಸಿದರು. ಕಳೆದ ಎಂಟು ವರ್ಷಗಳಿಂದ ತಿಬಟನೆ ನಡೆಸುತ್ತಿದ್ದರು ಆಳುವ ಸರ್ಕಾರಗಳು ನಮಗೆ ಮನ್ನಣೆ ನೀಡುತ್ತಿಲ್ಲ ಅಂತ ಹೇಳಿ ಕಿಡಿಕಾರಿದ್ರು. 

ಈಗಾಗಲೇ ಜಾರ್ಖಂಡ್, ಛತ್ತೀಸ್ಗಡ ಹಾಗೂ ರಾಜಸ್ಥಾನಗಳಲ್ಲಿ‌ NPS ರದ್ದು ಪಡಿಸಲಾಗಿದೆ.‌ ಆದರೆ ರಾಜ್ಯ ಸರ್ಕಾರ ಮಾತ್ರ ಹೊಸ ಪಿಂಚಣಿ ನಿಯಮವನ್ನೇ ಮುಂದುವರೆಸುವ ಮೂಲಕ ನೌಕರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದು ರಾಜ್ಯ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತರಾಮ್ ಆಕ್ರೋಶ ಹೊರಹಾಕಿದ್ದಾರೆ.ಸರ್ಕಾರಿ ನೌಕರರ ಪ್ರತಿಭಟನೆ ಇವತ್ತಿಗೆ ಮುಗಿದಿಲ್ಲ ಬೇಡಿಕೆ ಈಡೇರಿಕೆ ಆಗೋವರೆಗೂ ಕೂಡ ಪ್ರತಿಭಟನೆ ನಿಲ್ಲಿಸಲ ಅಂತ ಹೇಳಿ ಎಚ್ಚರಿಕೆಯನ್ನು ನೀಡಿದ್ದಾರೆ. ಇನ್ನು ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡು ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗುವುದರಿಂದ ಇಲಾಖೆಗಳಲ್ಲಿ ಕೆಲಸ ಕೊಂಚ ಲೇಟ್ ಆಗುವ ಸಾಧ್ಯತೆ ಇದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಯಾವುದೇ ಕಳ್ಳತನದ ಕೇಸ್ನಲ್ಲಿ ಪೊಲೀಸರು ಅರೆಸ್ಟ್ ಮಾಡಿಲ್ಲ-ಅಟ್ಟಿಕಾ ಬಾಬು