ಹಾಸನ: ನಿರಂತರ ಮಳೆಯಿಂದಾಗಿ ಸಕಲೇಶಪುರ ಸುಬ್ರಹ್ಮಣ್ಯ ನಿಲ್ದಾಣಗಳ ನಡುವಿನ ಭೂಕುಸಿತದ ದುರಸ್ತಿ ಕಾರ್ಯ ಮುಗಿದ್ದಿದ್ದರಿಂದ ಇದೀಗ ಮತ್ತೇ ಬೆಂಗಳೂರು ಮಂಗಳೂರು ನಡುವಿನ ರೈಲು ಸಂಚಾರ ಆರಂಭಗೊಂಡಿದೆ. ಇಂದು ಯಶವಂತಪುರ ಹಾಗೂ ಮಂಗಳೂರು ಜಂಕ್ಷನ್ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು ಈ ಮಾರ್ಗದಲ್ಲಿ ಸಂಚರಿಸಿದೆ.
ಕಡಗರವಳ್ಳಿ ಮತ್ತು ಯಡಕುಮೇರಿ ನಡುವಿನ ರೈಲು ಮಾರ್ಗದ ಕೆಳಬದಿಯಲ್ಲಿ ಭೂಕುಸಿತವಾಗಿದ್ದ ಕೆಲ ದಿನಗಳ ಕಾಲ ಬೆಂಗಳೂರು ಮಂಗಳೂರು ರೈಲು ಸಂಚಾರ ರದ್ಧಾಗಿತ್ತು. ಇದೀಗ ದುರಸ್ತಿ ಕಾರ್ಯವನ್ನು ತ್ವರಿತಗತಿಯಲ್ಲಿ ಮಾಡಿದ್ದರಿಂದ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕತಾಂಗಿದೆ.
ಆಗಸ್ಟ್ 4ರ ವೇಳೆಗೆ ದುರಸ್ಥಿ ಕಾರ್ಯ ಮುಗಿದ್ದರಿಂದ ರೈಲು ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಸುರಕ್ಷತೆ ದೃಷ್ಟಿಯಿಂದ ರೈಲಿನ ಎಂಜಿನ್ ಓಡಿಸುವ ಮೂಲಕ ಪರೀಕ್ಷೆ ನಡೆಸಲಾಯಿತು. ಆಗಸ್ಟ್ 6ರಂದು ಪೂರ್ಣ ಸಾಮಗ್ರಿ ಹೊತ್ತ ಗೂಡ್ಸ್ ರೈಲು ಈ ಮಾರ್ಗದಲ್ಲಿ ಯಶಸ್ವಿಯಾಗಿ ಸಂಚರಿಸಿದೆ. ಸದ್ಯಕ್ಕೆ ಈ ಸ್ಥಳದಲ್ಲಿ ರೈಲಿನ ವೇಗದ ಮಿತಿಯನ್ನು 15 ಕಿ.ಮೀ. ನಿಗದಿಗೊಳಿಸಲಾಗಿದೆ.