ಮಂಗಳೂರಿನಲ್ಲಿ ನಡೆದ ಗೋಲಿಬಾರ್, ಗಲಭೆಗೆ ಸಂಬಂಧಿಸಿದಂತೆ ಘಟನಾವಳಿಗಳ ಸಿಸಿ ಕ್ಯಾಮೆರಾ ದ್ರಶ್ಯ ಬಹಿರಂಗ ವಾಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸುವಂತಿವೆ.
ಇದೊಂದು ಪೂರ್ವ ನಿಯೋಜಿತ ಘಟನೆ ಎಂಬ ಅನುಮಾನ ವ್ಯಕ್ತವಾಗತೊಡಗಿದೆ. ಮಂಗಳೂರುನಲ್ಲಿ ಪೌರತ್ವ ಕಾಯಿದೆ ತಿದ್ದುಪಡಿ ವಿರೋಧಿಸಿ ಡಿಸೆಂಬರ್ 19 ರಂದು ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ಈ ವೇಳೆ ಪೊಲೀಸ್ ರು ಗಲಭೆ ನಿಯಂತ್ರಣಕ್ಕೆ ಲಾಠಿ ಚಾರ್ಜ್, ಅಶ್ರುವಾಯು, ಗೋಲಿಬಾರ್ ಮಾಡಿದ್ದರು. ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದರು.
ಇದು ರಾಜಕೀಯವಾಗಿ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿತ್ತು. ಆದರೆ ಈ ಘಟನೆಯ ಬಳಿಕ ದೊರೆತಿರುವ ಕೆಲವೊಂದು ಸಿಸಿ ಕ್ಯಾಮೆರಾ ದ್ರಶ್ಯಗಳು ಘಟನೆಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.
ಕಲ್ಲುಗಳನ್ನು ರಿಕ್ಷಾ, ಟೆಂಪೋ ದಲ್ಲಿ ತುಂಬಿಕೊಂಡು ಬರಲಾಗಿದೆ. ಬಳಿಕ ಅದರಲ್ಲಿರುವ ಗೋಣಿಗಳನ್ನು ರಸ್ತೆಗೆ ಹಾಕಿ ಅದರಿಂದಲ್ಲೇ ಕಲ್ಲು ಹೆಕ್ಕಿ ತೂರಾಟ ಮಾಡಿರುವ ದೃಶ್ಯಗಳು ಬಹಿರಂಗವಾಗಿವೆ.