Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅ‍ಪ್ರಾಪ್ತೆ ನವಜಾತ ಶಿಶುವಿಗೆ ಜನ್ಮನೀಡಿ, ಹತ್ಯೆ ಕೇಸ್‌: ತಾಯಿ, ಅಜ್ಜ, ಅಜ್ಜಿ ಅರೆಸ್ಟ್‌

Madikeri NewBorn Baby Case, Premature Newborn Case, Madikeri Police Station

Sampriya

ಮಡಿಕೇರಿ , ಶುಕ್ರವಾರ, 15 ನವೆಂಬರ್ 2024 (20:09 IST)
ಮಡಿಕೇರಿ: ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿ, ಮಗುವನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ನವಜಾತ ಶಿಶುವಿನ ತಾಯಿ, ಅಜ್ಜಿ ಹಾಗೂ ಅಜ್ಜನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಳೆದ ಅಕ್ಟೋಬರ್​ 17ರಂದು ಮಡಿಕೇರಿ ತಾಲೂಕಿನ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 14 ವರ್ಷದ ಬಾಲಕಿಯೊಬ್ಬಳು ರಹಸ್ಯವಾಗಿ ಮಗುವಿಗೆ ಜನ್ಮ ನೀಡಿದ್ದಳು. ಆದರೆ ಪ್ರಸೂತಿಯಾಗಿ 4 ದಿನ ಕಳೆದರೂ ನವಜಾತ ಶಿಶು ಕಂಡುಬಂದಿರಲಿಲ್ಲ. ಆಸ್ಪತ್ರೆಯಿಂದ ಆ ಶಿಶು ನಾಪತ್ತೆಯಾಗಿತ್ತು. ಮತ್ತೇ ಶಿಶುವಿನ ಮೃತದೇಹ ಗುಂಡಿಯಲ್ಲಿ ಪತ್ತೆಯಾಗಿತ್ತು.

ಮೊದಲಿಗೆ ಹೆತ್ತಾಕೆಯೇ ಮಗುವನ್ನು ನಾಪತ್ತೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ನಂತರ ಅಜ್ಜಿಯೇ ಹೂತಿಟ್ಟಿದ್ದು ತನಿಖೆಯಲ್ಲಿ ತಿಳಿದುಬಂದಿದೆ. ಈ ಸಂಬಂಧ  ತಾಯಿ, ಅಜ್ಜಿ ಹಾಗೂ ಅಜ್ಜನ ವಿರುದ್ಧ ಕೊಲೆ‌ ಪ್ರಕರಣ‌ ದಾಖಲಾಗಿದೆ.

ಇನ್ನೂ ಗರ್ಭಿಣಿಯಾಗಲು 14ವರ್ಷದ ಬಾಲಕ ಎಂದು ಬಾಲಕಿ ಆರೋಪಿಸಿದ್ದರಳು. ಈ ಸಂಬಂಧ ಹುಡುಗನ ವಿರುದ್ಧವೂ ಪ್ರಕರಣ ದಾಖಲಾಗಿದೆ.   ಇದೀಗ ತನಿಖೆ ಮಾಡುವ ಸಂದರ್ಭಗಳಲ್ಲಿ ಬಾಲಕಿಯ ಪೋಷಕರೇ ಮಗುವನ್ನು ಹತ್ಯೆ ಮಾಡಿರಬೇಕು ಎಂದು ಪೊಲೀಸರು ಅನುಮಾನಗೊಂಡು ಇದೀಗ ಅರೇಸ್ಟ್ ಮಾಡಿ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭ್ರಷ್ಟಾಚಾರಕ್ಕೆ ಮತ್ತೊಂದೆ ಹೆಸರೇ ಸಿದ್ದರಾಮಯ್ಯ, ಕಾಂಗ್ರೆಸ್‌: ರೇಣುಕಾಚಾರ್ಯ ಆಕ್ರೋಶ