Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರೀತಿಸು ಎಂದು ಹಿಂದೆ ಬೀಳುವ ಹುಡುಗರೆಲ್ಲಾ ಕಲಿಯಲೇಬೇಕಾದ ಪಾಠವಿದು!

ಪ್ರೀತಿಸು ಎಂದು ಹಿಂದೆ ಬೀಳುವ ಹುಡುಗರೆಲ್ಲಾ ಕಲಿಯಲೇಬೇಕಾದ ಪಾಠವಿದು!
Sindhanuru , ಶುಕ್ರವಾರ, 10 ಮಾರ್ಚ್ 2017 (11:05 IST)
ಸಿಂಧನೂರು:  ಹುಡುಗಿಯರ ಹಿಂದೆ ಒಂದೇ ಒಂದು ಸಾರಿ ನನ್ನ ಪ್ರೀತಿಸು ಎಂದು ಹಿಂದೆ ಬೀಳುವ ಯುವಕರೆಲ್ಲಾ ಈ ಘಟನೆ ನೋಡಿ ಪಾಠ ಕಲಿಯಲೇಬೇಕು. ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ನಡೆದ ಘಟನೆಯಿದು.

 
ಕೆಲವು ದಿನಗಳಿಂದ ಬಸ್ ಸ್ಟಾಪ್ ಗೆ ಬಂದು ಪ್ರೀತಿಸು ಎಂದು ಕಾಟ ಕೊಡ್ತಿದ್ದ ಯುವಕನಿಗೆ ಈ ಯುವತಿ ಸರಿಯಾಗಿಯೇ ಶಾಸ್ತಿ ಮಾಡಿದ್ದಾಳೆ. ದೇವ ಎಂಬ ಯುವಕ ಕಾಟ ಕೊಡ್ತಿದ್ದ ಆರೋಪಿ. ಎಲ್ಲಾ ಹುಡುಗಿಯರ ಹಾಗೆ ಈ ಹುಡುಗಿ ಹೆದರಿ ಸುಮ್ಮನಾಗಲಿಲ್ಲ. ಕಾಟ ಕೊಡ್ತಿದ್ದವನ ಮೇಲೆ ತಿರುಗಿ ಬಿದ್ದಳು.

ಕಾಟ ಕೊಡಲು ಬಂದ ಯುವಕನನ್ನು ಅಟ್ಟಾಡಿಸಿ ಥಳಿಸಿದಳು. ಅಲ್ಲದೆ, ಚಾಕು ತೋರಿಸಿ, ಪ್ರೀತಿಸು ಎಂದು ಕಾಟ ಕೊಡ್ತೀಯಾ ಎಂದು ಧಮಕಿ ಹಾಕಿದಳು. ಈಕೆಯ ಜತೆ ಸಾರ್ವಜನಿಕರೂ ಸೇರಿಕೊಂಡು ಯುವಕನಿಗೆ ತದುಕಿದರು. ನಂತರ ಪೊಲೀಸರು ಬಂದು ಯುವಕನನ್ನು ಅರೆಸ್ಟ್ ಮಾಡಿದರು. ಅಂದ ಹಾಗೆ ಈ ಯುವತಿಗೆ ಈ ಮೊದಲೂ ಈ ವ್ಯಕ್ತಿ ಪ್ರೀತಿಸು ಎಂದು ಕಾಟ ಕೊಡ್ತಿದ್ದನಂತೆ. ಆಗಲೂ ಆಕೆ ತಿರುಗಿ ಬಿದ್ದರೂ ಪ್ರಯೋಜನವಾಗಿರಲಿಲ್ಲ. ಆದರೆ ಈ ಬಾರಿ ಮಾತ್ರ ತಕ್ಕ ಶಾಸ್ತಿ ಮಾಡಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲು