Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರೇಮಿಯ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ ಪ್ರಿಯತಮೆ

ಪ್ರೇಮಿಯ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ ಪ್ರಿಯತಮೆ
ಬೆಂಗಳೂರು , ಶುಕ್ರವಾರ, 7 ಅಕ್ಟೋಬರ್ 2016 (14:27 IST)
ಅನ್ಯ ಧರ್ಮದ ಯುವಕನನ್ನು ಪ್ರೀತಿಸಿ ಆತನೊಂದಿಗೆ ಪರಾರಿಯಾಗಿ ನಂತರ ತಂದೆತಾಯಿಗೆ ಹೆದರಿ ಪ್ರಿಯಕರನ ಮೇಲೆ ಪ್ರಿಯತಮೆಯೇ ಅತ್ಯಾಚಾರ ಹೊರಿಸಿದ ವಿಚಿತ್ರ ಘಟನೆ ವರದಿಯಾಗಿದೆ. 
 
ಪುತ್ರಿ ನೀಡಿದ ಮಾಹಿತಿಯ ಮೇರೆಗೆ ಆಕೆಯ ಪೋಷಕರು ಫರ್ಹಾನ್ ಅಹ್ಮದ್ ಮತ್ತು ಆತನ ಸ್ನೇಹಿತ ಸಂದೀಪ್ ವಿರುದ್ಧ ರೇಪ್ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದರು. 
 
ಬಾಲಕಿ ಚಾಮರಾಜಪೇಟೆಯಲ್ಲಿರುವ ಕಾಲೇಜಿನಲ್ಲಿ ಓದುತ್ತಿದ್ದು, ಅನ್ಯಧರ್ಮದ ಫರ್ಹಾನ್‌ನನ್ನು ಪ್ರೀತಿಸುತ್ತಿದ್ದಳು. ಆದರೆ,ಯುವಕ ಬೇರೆ ಧರ್ಮಕ್ಕೆ ಸೇರಿದವನು ಎನ್ನುವ ಕಾರಣಕ್ಕೆ ಆತನೊಂದಿಗೆ ವಿವಾಹ ಮಾಡಿಕೊಡಲು ಪೋಷಕರು ನಿರಾಕರಿಸಿದ್ದರು.
 
 
ಪೋಷಕರು ತಾನು ಪ್ರೀತಿಸಿದ ಯುವಕನೊಂದಿಗೆ ವಿವಾಹವಾಗಲು ಅನುಮತಿ ನೀಡುವುದಿಲ್ಲ ಎನ್ನುವುದು ತಿಳಿದ ಬಾಲಕಿ, ಪ್ರಿಯಕರನೊಂದಿಗೆ ಪರಾರಿಯಾಗಿದ್ದಳು. ಆದರೆ, ಪೋಷಕರಿಗೆ ಹೆದರಿ ಪ್ರೀಯಕರನ ಮೇಲೆ ಅತ್ಯಾಚಾರದ ದೂರು ದಾಖಲಿಸಿದ್ದಳು.
 
ಪೊಲೀಸರು ಇಬ್ಬರು ಆರೋಪಿಗಳು ಮತ್ತು ಬಾಲಕಿಯ ವಿಚಾರಣೆ ನಡೆಸಿದಾಗ ಸತ್ಯ ಸಂಗತಿ ಬಹಿರಂಗವಾಗಿದೆ. ಬಾಲಕಿಯ ಅಪಹರಣ, ಅತ್ಯಾಚಾರ ದೂರಿನಿಂದಾಗಿ ಯುವಕರನ್ನು ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದುಗೆ ಮತ್ತೆ ಬ್ಯಾಡ್ 'ಟೈಮ್'