Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೇಂದ್ರದ ಬಜೆಟ್ ಬಡವರ ವಿರೋಧಿ ಬಜೆಟ್: ಕುಮಾರಸ್ವಾಮಿ ಆಕ್ರೋಶ

ಕೇಂದ್ರದ ಬಜೆಟ್ ಬಡವರ ವಿರೋಧಿ ಬಜೆಟ್: ಕುಮಾರಸ್ವಾಮಿ ಆಕ್ರೋಶ
ಕೊಪ್ಪಳ್ಳ , ಬುಧವಾರ, 1 ಫೆಬ್ರವರಿ 2017 (17:07 IST)
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿರುವ ಬಜೆಟ್ ದೇಶದ ಅಭಿವೃದ್ಧಿಗೆ ಪೂರಕವಾಗಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. 
 
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ಬಡವರ ವಿರೋಧಿಯಾಗಿದ್ದು, ಈ ಬಜೆಟ್‌ನಿಂದ ರೈತರಿಗೆ ಯಾವುದೇ ಉಪಯೋಗವಾಗುವುದಿಲ್ಲ ಎಂದು ಆರೋಪಿಸಿದರು. 
 
ದೇಶದ ರೈತರಿಗೆ ನಿರಾಸೆಯಾಗಿದೆ. ಪ್ರಸಕ್ತ ಸಾಲಿನ ಬಜೆಟ್ ಪಂಚ ರಾಜ್ಯಗಳ ಚುನಾವಣೆಯ ಮೇಲೆ ಯಾವುದೇ ತರಹದ ಪರಿಣಾಮ ಬೀರಲ್ಲ ಎಂದು ಕಿಡಿಕಾರಿದರು. 
 
ಉತ್ತರಪ್ರದೇಶ ಮತ್ತು ಪಂಜಾಬ್ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ರೈತರ ಕಬ್ಬಿನ ಬಾಕಿ ಮೊತ್ತ 9 ಸಾವಿರ ಕೋಟಿ ರೂಪಾಯಿ ಕೊಡಲು ಬಜೆಟ್‌ನಲ್ಲಿ ಹೇಳಲಾಗಿದೆ. ಆದರೆ, ಕೇವಲ 60 ದಿನಗಳ ಬಡ್ಡಿ ಮನ್ನಾ ಮಾಡಿದರೇ ಸಾಕೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್‌.ಎಂ.ಕೃಷ್ಣ ಬಿಜೆಪಿ ಸೇರ್ಪಡೆ ಮಾಹಿತಿಯಿಲ್ಲ: ಜಿ.ಪರಮೇಶ್ವರ್