ಬೆಂಗಳೂರಿನಲ್ಲಿ ಗ್ಯಾಸ್ ಗೀಸರ್ ಅನಿಲ ಸೋರಿಕೆಯಿಂದಾಗಿ ಯುವತಿಯೋರ್ವಳು ಸಾವನಪ್ಪಿದ್ದಾಳೆ..ಬೆಂಗಳೂರಿನ ಕಾಮಾಕ್ಷಿಪಾಳ್ಯ ಮೀನಾಕ್ಷಿ ನಗರದಲ್ಲಿ ಘಟನೆ ನಡೆದಿದೆ. ರಾಜೇಶ್ವರಿ ಮೃತ ಯುವತಿ.. ಈಕೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ಲು.
ಅಣ್ಣನ ವಿವಾಹ ಹಿನ್ನೆಲೆ ರಜೆ ಹಾಕಿದ್ದ ಯುವತಿ, ಸ್ನಾನ ಮಾಡಲು ಹೋಗಿದ್ದ ವೇಳೆ ಅವಘಡ ಸಂಭವಿಸಿದೆ.. ಗ್ಯಾಸ್ಗೀಸರ್ನಿಂದ ವಿಷ ಅನಿಲ ಸೋರಿಕೆಯಾದ ಹಿನ್ನೆಲೆ ಯುವತಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ.. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಷ್ಟೊತ್ತಿಗಾಗಲೇ ಯುವತಿ ಮೃತಪಟ್ಟಿದ್ಲು.. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.