ದೇವಸ್ಥಾನಕ್ಕೆ ಆಗಮಿಸಿದ ಶಾಸಕ ಮೊಯಿದ್ದೀನ್ ಬಾವ ಗೆ ಮಾಲೆ ಹಾಕಿದ್ದನ್ನು ಸ್ಥಳೀಯ ಯುವಕರು ಅಕ್ಷೇಪಿಸಿದ್ದರಿಂದ ದೈವ ತನ್ನ ಆಯುಧವನ್ನು ನೆಲಕ್ಕೆ ಊರಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳೂರಿನ ಮಲ್ಲೂರು ದೈವಸ್ಥಾನದಲ್ಲಿ ನಡೆದಿದೆ.
ಕಳೆದ ಸೋಮವಾರ ಮಲ್ಲೂರು ದೈವಸ್ಥಾನದಲ್ಲಿ ಧೂಮಾವತಿ ಬಂಟ ದೈವಗಳ ನೇಮೋತ್ಸವ ಕಾರ್ಯಕ್ರಮ ನಡೆಯುತಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಮೊಯಿದ್ದೀನ್ ಬಾವ ಸ್ಥಳಕ್ಕೆ ಆಗಮಿಸಿದ್ರು.
ಈ ಸಂದರ್ಭದಲ್ಲಿ ದೈವದ ಸೂಚನೆ ಮೇರೆಗೆ ಕ್ಷೇತ್ರದ ಮುಖ್ಯಸ್ಥರು ಮೊಯಿದ್ದೀನ್ ಬಾವ ಗೆ ಹೂ ಹಾರವನ್ನು ಹಾಕಿದ್ದರು. ಇದಕ್ಕೆ ಅಲ್ಲಿದ್ದ ಯುವಕರು ಅಕ್ಷೇಪ ವ್ಯಕ್ತಪಡಿಸಿದ್ದರು. ಮೊಯಿದ್ದೀನ್ ಬಾವ ಎದುರಲ್ಲೇ ಯುವಕರು ಗಲಾಟೆ ಆರಂಭಿಸಿದ್ದರು. ಇದನ್ನೆಲ್ಲಾ ಮೆಟ್ಟಿಲಲ್ಲಿ ಕುಳಿತು ನೋಡುತ್ತಿದ್ದ ದೈವ ಗುಡಿಯ ಒಳಗಿದ್ದ ಆಯುಧ ವನ್ನು ತೆಗೆದುಕೊಂಡು ನೆಲಕ್ಕೆ ಊರಿ ಆಕ್ರೋಶ ವ್ಯಕ್ತಪಡಿಸಿದೆ. ತುಳುನಾಡಿನಲ್ಲಿ ದೈವಗಳ ಮೇಲೆ ಜನರಿಗೆ ಅಪಾರ ನಂಬಿಕೆ ಇದ್ದು ದೈವ ಆಯುಧವನ್ನು ನೆಲಕ್ಕೆ ಊರಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ನಂಬಿಕೆ ಇದೆ. ಹಾಗಾಗಿ ದೈವ ದ ಆಕ್ರೋಶ ಜನರಲ್ಲಿ ಭಯವನ್ನು ಉಂಟುಮಾಡಿದೆ.