Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸೈಂಟ್ ಮಾರ್ಥಾಸ್‍ ವೈದ್ಯರು ಮತ್ತು ಸಿಬ್ಬಂದಿ ನಡುವೆ ಕ್ರಿಕೆಟ್

ಸೈಂಟ್ ಮಾರ್ಥಾಸ್‍ ವೈದ್ಯರು ಮತ್ತು ಸಿಬ್ಬಂದಿ ನಡುವೆ ಕ್ರಿಕೆಟ್
Bangalore , ಶನಿವಾರ, 11 ಫೆಬ್ರವರಿ 2017 (08:41 IST)
ಸೈಂಟ್ ಮಾರ್ಥಾಸ್ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗೆ ಇದು ಮೋಜಿನ ಕ್ರಿಕೆಟ್ ದಿನವಾಗಿತ್ತು. ಸೈಂಟ್ ಮಾರ್ಥಾಸ್ ಪ್ರೀಮಿಯರ್ ಲೀಗ್ (ಎಸ್‍ಎಂಪಿಎಲ್) ನ 7ನೇ ಆವೃತ್ತಿ ವೈಎಂಸಿಎ ಮೈದಾನದಲ್ಲಿ ಅತ್ಯಂತ ಮೋಜಿನಿಂದ ನಡೆಯಿತು. ತಂಡಗಳು ಆಸ್ಪತ್ರೆಯ ವಿಶೇಷತೆಗಳು ಹಾಗೂ ವಿಭಾಗಗಳ ಆಧಾರದಲ್ಲಿ ಬಂದಿದ್ದವು. ಭಾಗವಹಿಸಿದ ತಂಡಗಳು ಮತ್ತು ಅವುಗಳ ಮಾಲೀಕರ ವಿವರಗಳು ಇಂತಿವೆ:
 
ಸರ್ಜಿಕಲ್ - ಡಾ.ಅರುಣ್ ಮತ್ತು ಡಾ.ಸತ್ಯಕೃಷ್ಣ (ಸರ್ಜರಿ ಎಚ್‍ಒಡಿ ಮತ್ತು ಸರ್ಜಿಕಲ್ ವಿಭಾಗದ ಯುನಿಟ್ ಮುಖ್ಯಸ್ಥರು)
ವೈದ್ಯಕೀಯ -  ಡಾ.ರವೀಂದ್ರನಾಥ್ (ಮೆಡಿಕಲ್ ಸುಪರಿಂಟೆಂಡೆಂಟ್)
ನಿರ್ವಹಣೆ - ಸಿಸ್ಟರ್ ನವೋಮಿ (ನರ್ಸಿಂಗ್ ಸುಪರಿಂಟೆಂಡೆಂಟ್)
ಸೈಂಟ್ ಮಾರ್ಥಾಸ್ ಹಾರ್ಟ್ ಸೆಂಟರ್ - ಶೈಲೇಶ್ (ನಿರ್ದೇಶಕರು, ಸೈಂಟ್ ಮಾರ್ಥಾಸ್ ಹಾರ್ಟ್ ಸೆಂಟರ್)
ಅಡ್ಮಿನ್ - ಡಾ. ಜೇಸನ್ (ಹಿರಿಯ ವೈದ್ಯಕೀಯ ಅಧಿಕಾರಿ)
ನರ್ಸಿಂಗ್ ಸಹಾಯಕರ ತಂಡ - ಸಿಸ್ಟರ್ ಪ್ರಮೀಳಾ (ಸಿಸ್ಟರ್ ಸುಪೀರಿಯರ್)
 
ಅಡ್ಮಿನ್ ತಂಡವು 15,000 ರೂ ಬಹುಮಾನದ ಮಾರ್ಥಾಸ್ ಪ್ರೀಮಿಯರ್ ಲೀಗ್‍ನ ಪ್ರಥಮ ಬಹುಮಾನ ಗೆದ್ದರೆ, ಸರ್ಜಿಕಲ್ ತಂಡವು ಸೈಂಟ್ ರನ್ನರ್ ಆಪ್ ಆಯಿತು. ಸರ್ಜಿಕಲ್ ತಂಡದ ಡಾ.ಕಿರಣ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು.
 
ಬಿಡ್ಡಿಂಗ್ ಆಧಾರದಲ್ಲಿ ತಂಡದ ಮಾಲೀಕತ್ವವನ್ನು ನೀಡಲಾಗಿತ್ತು. ಪ್ರತಿ ತಂಡದ ಮಾಲೀಕರು 6,000 ರೂ. ಬೆಲೆಗೆ ತಮ್ಮ ತಂಡವನ್ನು ರಚಿಸಿಕೊಳ್ಳಬೇಕಿತ್ತು. ಒಟ್ಟು ಬಹುಮಾನದ ಮೊತ್ತ 15,000 ರೂ. ಆಗಿದ್ದು ಅದನ್ನು ತಂಡದ ಮಾಲೀಕರು ಮತ್ತು ಸದಸ್ಯರು ಸಮಾನವಾಗಿ ಹಂಚಿಕೊಳ್ಳಬೇಕಿತ್ತು. ರನ್ನರ್ ಅಪ್ ತಂಡವು 12,000 ರೂ. ಪಡೆಯಿತು. ಎಲ್ಲಾ ವಿಜೇತರಿಗೆ ಗೆಲುವಿನಲ್ಲಿ ಸಂಭ್ರಮಿಸಲು ಟ್ರೋಫಿಯನ್ನು ಹಸ್ತಾಂತರಿಸಲಾಯಿತು. ವಿಜೇತರು ಹಾಗೂ ರನ್ನರ್ ಅಪ್‍ಗೆ ಪದಕಗಳನ್ನೂ ವಿತರಿಸಲಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಮ್ಮ ಕಟ್ಟಿದ ಪಕ್ಷವನ್ನು ಯಾರಿಗೂ ಹೈಜಾಕ್ ಮಾಡಲು ಅವಕಾಶ ಕೊಡಲ್ಲ: ಪನೀರ್ ಸೆಲ್ವಂ