ಕೊರೋನಾ ತಡೆಗಾಗಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲಿರುವ ಕರೋನಾ ಸೈನಿಕರಿಗೆ ತರಬೇತಿ ನಡೆಯಿತು.
ಬೀದರ್ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಭಾಂಗಣದಲ್ಲಿ ತರಬೇತಿ ನಡೆಯಿತು.
ಈ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಗವಿಶಿದ್ದಪ್ಪ ಹೊಸಮನಿ ಮಾತನಾಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕರ್ನಾಟಕ ಹಾಗೂ ಸರ್ಕಾರದ ಕಾರ್ಮಿಕ ತರಬೇತಿ ಸಂಸ್ಥೆಯ ಸಹಯೋಗದಲ್ಲಿ, ಸಾರ್ವಜನಿಕರ ಸಹಭಾಗಿತ್ವದಲ್ಲಿ ಆಯ್ಕೆಯಾದ ಸೈನಿಕರು ಕೋರೋನಾ ವದಂತಿಗಳ ವಿರುದ್ಧ ಹೋರಾಡಲು ಈ ಅಭಿಯಾನ ಜಾರಿ ತರಲಾಗಿದೆ ಎಂದು ತಿಳಿಸಿದರು. ಸ್ವಯಂ ಸೇವಕರು ಕರೋನಾ ತಡೆಗಾಗಿ ಕಾರ್ಯನಿರ್ವಹಿಸುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕರೋನಾ ಸೈನಿಕರಿಗೆ ನೀಡಿರುವ ಮಾರ್ಗಸೂಚಿಗಳನ್ನು ತಿಳಿಸಿದರು.
ಕೋರೊನಾ ವೈರಾಣು ಹರಡುವಿಕೆ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ಅಥವಾ ಸಮುದಾಯದಿಂದ ಹೊರಬರುವ ವದಂತಿ ಬಂದಾಗ ಸ್ಥಳ ಪರಿಶೀಲನೆ ಅಗತ್ಯವಿದ್ದಲ್ಲಿ ಆಯಾ ತಾಲೂಕಿನಲ್ಲಿರುವ ಸೈನಿಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ನೈಜ ಮಾಹಿತಿ ಸಂಗ್ರಹಿಸಿ ತಂಡಕ್ಕೆ ಮಾಹಿತಿ ಕೊಡಬೇಕು. ಸ್ಥಳೀಯ ವಿದ್ಯಮಾನಗಳ ಬಗ್ಗೆ ತಿಳಿಸಬೇಕು ಎಂದರು.