ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಐಟಿ ಸಂಕಷ್ಟ ಎದುರಾಗಿದ್ದು, ಬಂಧನ ಭೀತಿ ಎದುರಿಸುತ್ತಿದ್ದಾರೆ.
ಐಟಿ ದಾಳಿ ಸಂದರ್ಭದಲ್ಲಿ ದಾಖಲೆ ಹರಿದು ಹಾಕಿರುವ ಆರೋಪಕ್ಕೆ ಸಂಬಂಧಿಸಿ ಆರ್ಥಿಕ ಅಪರಾಧಗಳ ಕೋರ್ಟು ಡಿ.ಕೆ.ಶಿವಕುಮಾರ ವಿರುದ್ಧ ಎಫ್ಐಆರ್ ದಾಖಲಿಸಲು ಸೂಚನೆ ನೀಡಿದೆ. ಜೊತೆಗೆ ಮಾರ್ಚ್ 22ರೊಳಗೆ ಖುದ್ದು ಹಾಜರಾಗಲು ಡಿ.ಕೆ.ಶಿವಕುಮಾರ ಅವರಿಗೆ ನಿರ್ದೇಶನ ನೀಡಿದೆ.
ಈಗಲಟನ್ ರೇಸಾರ್ಟ್ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲು ಐಟಿ ಅಧಿಕಾರಿಗಳು ಸಿದ್ದತೆ ಮಾಡಿಕೊಂಡಿದ್ದು, ಎಫ್ಐಆರ್ ದಾಖಲಾದರೆ ಡಿ.ಕೆ.ಶಿವಕುಮಾರರನ್ನು ಬಂಧಿಸಲು ಅವಕಾಶ ದೊರೆತಂತಾಗುತ್ತದೆ. ಇದನ್ನು ಅರಿತಿರುವ ಶಿವಕುಮಾರ್ ಈಗಾಗಲೇ ವಕೀಲರ ಜೊತೆ ಚರ್ಚೆ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.