ಬೆಂಗಳೂರು: ಇಂದು ರಾಜ್ಯ ವಿಧಾನಮಂಡಲ ಅಧಿವೇಶನ ಕೊನೆಗೊಳ್ಳಲಿದೆ. ಇದರೊಂದಿಗೆ ಖಾಲಿ ಖಾಲಿ ಕುರ್ಚಿಗಳ ನಡುವೆ ನಡೆದ ಏಳು ದಿನಗಳ ಕಿರು ಅಧಿವೇಶನಕ್ಕೆ ತೆರೆ ಬೀಳಲಿದೆ.
ಕಂಬಳ ವಿಧೇಯಕ, ಬರ ಚರ್ಚೆ ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಈ ಕಿರು ಅವಧಿಯ ಅಧಿವೇಶನದಲ್ಲಿ ಚರ್ಚಿಸಲಾಗಿತ್ತು. ಆದರೆ ಎಲ್ಲಾ ದಿನವೂ ಆಡಳಿತ ಮತ್ತು ವಿರೋಧ ಪಕ್ಷಗಳ ಶಾಸಕರ ಕೊರತೆ ಎದ್ದು ಕಾಣುತ್ತಿತ್ತು.
ಅಂತೂ ಶಾಸಕರಿಗೆ ಅಧಿವೇಶನದಿಂದ ರೆಸ್ಟ್ ಸಿಕ್ಕಿದಂತಾಗಿದೆ. ಈ ನಡುವೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ರಮೇಶ್ ಜಾರಕಿಹೊಳಿ ಕೈ ಬಿಡಲು ನಿನ್ನೆ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಅದು ಇಂದೂ ಮುಂದುವರಿಯುವ ಸಾಧ್ಯತೆಯಿದೆ. ಕಿರು ಅವಧಿಯ ಅಧಿವೇಶನವಾಗಿದ್ದರೂ, ಜನರ ಸಮಸ್ಯೆಗಳ ಚರ್ಚೆಗಿಂತ ಧರಣಿ, ಗದ್ದಲಗಳು, ಹಾಗೂ ಶಾಸಕರ ಗೈರಿನ ನಡುವೆಯೇ ಕಳೆದು ಹೋಗುತ್ತಿರುವುದು ವಿಪರ್ಯಾಸವೇ ಸರಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ