ಶ್ರೀಮಠದ ವತಿಯಿಂದ ಉಚಿತ ಸಾಮೂಹಿಕ ವಿವಾಹ ಏರ್ಪಡಿಸುವ ಮೂಲಕ ಬಡ ಜನರ ಭಾರ ಕಡಿಮೆ ಮಾಡುವ ಕೆಲಸ ಮಾಡಲಾಗುತ್ತಿದೆ. ಆಸಕ್ತರಿಂದ ನೋಂದಣಿಗೆ ಆಹ್ವಾನಿಸಲಾಗಿದೆ.
ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಪ್ರಸಿದ್ಧ ಚಿನ್ಮಯಗಿರಿಯ ಗುಡ್ಡದ ಮಹಾಂತನ ಜಾತ್ರಾ ಮಹೋತ್ಸವ ಫೆ .6 ರಿಂದ 9 ರವರೆಗೆ ನಡೆಯಲಿದೆ.
ಈ ಪ್ರಯುಕ್ತ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ಜೋಡಿಗಳ ನೋಂದಣಿ ಕಾರ್ಯ ಆರಂಭಿಸಲಾಗಿದೆ ಎಂದು ಮಠದ ಪೀಠಾಧೀಪತಿ ವೀರ ಮಹಾಂತ ಶಿವಾಚಾರ್ಯರು ತಿಳಿಸಿದ್ದಾರೆ.
ಮದುವೆಗೆ ಕಡ್ಡಾಯವಾಗಿ ವಧು - ವರರ ಆಧಾರ ಕಾರ್ಡ ಹಾಗೂ ಕಾನೂನಾತ್ಮಕ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿರಲಿದೆ ಎಂದಿದ್ದಾರೆ.