ಕರ್ನಾಟಕ ರಾಜ್ಯ ಕಾರ್ಮಿಕ ಇಲಾಖೆ ವತಿಯಿಂದ ಲೇಬರ್ ಕಾರ್ಡ್ ಇರುವ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಗ್ತಿದೆ. ಬೆಂಗಳೂರಿನಲ್ಲಿ ಒಟ್ಟು 8 ಕಡೆ ತಪಾಸಣೆ ನಡೆಸಲಾಗ್ತಿದ್ದು, ಕೆಂಪೇಗೌಡ ಬಸ್ನಿಲ್ದಾಣದಲ್ಲೂ ಆರೋಗ್ಯ ತಪಾಸಣೆ ನಡೆಸಲಾಗ್ತಿದೆ. ಜುಲೈ 8 ರಂದು ಉಚಿತ ಆರೋಗ್ಯ ತಪಾಸಣೆಗೆ ಚಾಲನೆ ನೀಡಲಾಗಿದ್ದು, ಆಗಸ್ಟ್ 7 ರ ತನಕ ತಪಾಸಣೆ ನಡೆಸಯಲಿದೆ. ಇನ್ನು ಈ ತಪಾಸಣಾ ಶಿಬಿರಲದಲ್ಲಿ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳ ತಪಾಸಣೆ ನಡೆಸಲಿದ್ದು, ಅವಶ್ಯಕತೆ ಇರುವ ಚಿಕಿತ್ಸೆ ನೀಡಲು ಆಸ್ಪತ್ರೆಗಳನ್ನೂ ಸೂಚಿಸಲಾಗ್ತಿದೆ. ಸದ್ಯ ಕಳೆದ ವಾರ 20 ರಿಂದ 25 ಜನರು ತಪಾಸಣೆಗೆ ಒಳಗಾಗಿದ್ರೆ. ಈ ವಾರ ದಿನಕ್ಕೆ 70 ಜನರಿಗೆ ತಪಾಸಣೆ ಮಾಡಲಾಗ್ತಿದೆ. ಇನ್ನು ಲೇಬರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ತೋರಿಸಿ ಸಾರ್ವಜನಿಕರು ಈ ಉಚಿತ ಆರೋಗ್ಯ ತಪಾಸಣೆಯ ಪ್ರಯೋಜನ ಪಡೆಯಬಹುದಾಗಿದೆ ಅಂತಾ ಆರೋಗ್ಯ ಸಿಬ್ಬಂದಿ ಮಾಹಿತಿ ಹಂಚಿಕೊಂಡಿದ್ದಾರೆ.