Webdunia - Bharat's app for daily news and videos

Install App

ಮರವಂತೆ ಸಮುದ್ರತೀರದ ಫೋಟೊ ಹಂಚಿಕೊಂಡ ನಾರ್ವೆ ಮಾಜಿ ಸಚಿವ!

Webdunia
ಗುರುವಾರ, 19 ಮೇ 2022 (22:08 IST)
ಉತ್ತರ ಯುರೋಪ್‌ನ ನಾರ್ವೆ ದೇಶದ ಮಾಜಿ ಸಚಿವ ಎರಿಕ್‌ ಸೊಲ್ಹೆಮ್‌ ಅವರು ಮರವಂತೆಯ ಸಮುದ್ರ ತೀರದ ಚಿತ್ರವನ್ನು ತಮ್ಮ ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.
ಎರಿಕ್‌ ಸೊಲ್ಹೆಮ್‌ ನಾರ್ವೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ವಿಶೇಷ ಸಲಹೆಗಾರ ರಾಗಿದ್ದು ರಾಜಕೀಯ ಪ್ರವೇಶಿಸಿ ಅಂತಾರಾಷ್ಟ್ರೀಯ ಅಭಿವೃದ್ಧಿ ಸಚಿವರಾಗಿ, ಪರಿಸರ ಸಚಿವರಾಗಿ 2012ರ ವರೆಗೆ ಸೇವೆ ಸಲ್ಲಿಸಿದ್ದಾರೆ.
2016ರಿಂದ 2018ರ ವರೆಗೆ ವಿಶ್ವಸಂಸ್ಥೆಯ ಅಂಡರ್‌-ಸೆಕ್ರೆಟರಿ-ಜನರಲ್‌ ಮತ್ತು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದರು.
ಮೇ 17ರಂದು ಮರವಂತೆಯ ಚಿತ್ರವನ್ನು ಸೈಕಲಿಂಗ್‌ ಮಾಡಬಹುದಾದ ವಿಶ್ವದ ಅತ್ಯಂತ ಚಂದದ ರಸ್ತೆ, ಭಾರತದ ಉಡುಪಿ ಜಿಲ್ಲೆಯ ಮರವಂತೆಯಲ್ಲಿದೆ ಎಂದು ಹಂಚಿಕೊಂಡಿದ್ದಾರೆ. ಇದನ್ನು ಒಂದೇ ದಿನದಲ್ಲಿ 81 ಸಾವಿರ ಮಂದಿ ಇಷ್ಟಪಟ್ಟು, 7 ಸಾವಿರ ಮಂದಿ ಮರುಹಂಚಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments