ಸಾವರ್ಕರ್ ಬ್ರಿಟಿಷರ ವಸಾಹತುಶಾಹಿಯನ್ನು ಬೆಂಬಲಿಸಿದವರು ಅವರು ಹೇಗೆ ವೀರ್ ಆಗ್ತಾರೆ ಎಂದು ಮಾಜಿ ಸಂಸದೆ ನಟಿ. ರಮ್ಯಾ ಟ್ವೀಟ್ ಮಾಡಿದ್ದಾರೆ.
ಸಾರ್ವಕರ್ ದೇಶಪ್ರೇಮಿಯಾಗಿರದೆ ಬ್ರಿಟಿಷರ್ ಓಲೈಕೆಯಲ್ಲಿ ತೊಡಗಿದ್ದರು. ಅಂತಹವರಿಗೆ ವೀರ್ ಎನ್ನುವ ಗೌರವ ಕೊಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
ನಟಿ ರಮ್ಯಾ ಟ್ವೀಟ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಪ್ರತಿಕ್ರಿಯೆಗಳ ಸುರಿಮಳೆಯಾಗುತ್ತಿದೆ. ಆದರೆ, ಯಾವುದಕ್ಕೂ ಕ್ಯಾರೆ ಎನ್ನುದ ರಮ್ಯ ತಾವು ಮಾಡಿದ ಟ್ವೀಟ್ನಲ್ಲಿ ಸತ್ಯಾಂಶವಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಬಿಜೆಪಿ ಕಾರ್ಯಕರ್ತರು ರಮ್ಯ ಟ್ವೀಟ್ಗೆ ಪ್ರತಿಯಾಗಿ ಟ್ವೀಟ್ ಸಮರ ಆರಂಭಿಸಿದ್ದಾರೆ. ಆದರೆ, ಕೆಲವರು ರಮ್ಯಾ ಅವರನ್ನು ಬೆಂಬಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.