ಮೈತ್ರಿ ಸರ್ಕಾರ ಬಿದ್ದು ಹೋದ ಹಿನ್ನಲೆಯಲ್ಲಿ ಮಾಜಿ ಸಚಿವ ಸಾರಾ ಮಹೇಶ್ ಅವರಿಗೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ನಂಬರ್ 2 ನಿವಾಸವನ್ನು ಖಾಲಿ ಮಾಡುವಂತೆ ಸಿಎಂ ಬಿಎಸ್ ವೈ ಅವರು ಅಧಿಕಾರಿಗಳ ಮೂಲಕ ಸಾರಾ ಮಹೇಶ್ ಗೆ ಸೂಚನೆ ನೀಡಿದ್ದರು.
ಆದರೆ ಸಿಎಂ ಮಾತಿಗೆ ಕ್ಯಾರೆ ಎನ್ನದ ಸಾರಾ ಮಹೇಶ್ ಅವರು ಇದೀಗ ಸರ್ಕಾರ ಬಿದ್ದ 50 ದಿನಕ್ಕೆ ಮಾಜಿ ಸಚಿವರು ಮನೆ ಖಾಲಿ ಮಾಡಿದ್ದಾರೆ. ಈ ಹಿಂದೆ ಹಲವು ಬಾರಿ ಅಧಿಕಾರದಲ್ಲಿದ್ದಾಗ ಸಿಎಂ ಬಿಎಸ್ ವೈ ಅವರು ಇದೇ ನಿವಾಸದಲ್ಲಿ ನೆಲೆಸಿದ್ದರಿಂದ ಇದನ್ನು ಅವರ ಲಕ್ಕಿ ಹೌಸ್ ಎನ್ನಲಾಗಿದೆ.