ಸಚಿವರಿಗೆ ಬರ ಅಧ್ಯಯನ ವರದಿ ನೀಡುವಂತೆ ಟಾಸ್ಕ್ ನಿಡಿದ ವಿಚಾರವಾಗಿ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದ್ದುರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ.ಸಿಎಂ ಸೇರಿದಂತೆ ಯಾರೂ ಪ್ರವಾಸ ಮಾಡಲಿಲ್ಲ.ಬರ ಬಂದಾಗಲೂ ಪ್ರವಾಸ ಮಾಡಲಿಲ್ಲ.ಬಿಜೆಪಿ ಈಗ ಪ್ರವಾಸ ಮಾಡ್ತಿದೆ.
ನಾಗರೀಕರ ಸಮಸ್ಯೆ ಆಲಿಸಲು ಮುಂದಾಗಿದೆ.ಕುಡಿಯುವ ನೀರು, ಲೋಡ್ ಶೆಡ್ಡಿಂಗ್ ಅನೇಕ ವಿಚಾರದ ಮಾಹಿತಿ ಸಂಗ್ರಹಿಸಲಿದೆ.ಈಗಾದ್ರೂ ಕಾಂಗ್ರೆಸ್ ಸರ್ಕಾರಕ್ಕೆ ಜ್ಞಾನೋದಯ ಆಗಿದೆ.ಬಿಜೆಪಿ ಹೋಗ್ತಿದೆ.ನಾವು ಈಗಲಾದ್ರೂ ಹೋಗೋಣ ಅನ್ನೋ ಬುದ್ದಿ ಬಂದಿದೆ.ಕೇಂದ್ರದ ಗೈಡ್‌ಲೈನ್ಸ್ ಪ್ರಕಾರ ನಮ್ಮ ರಾಜ್ಯದ ಜನರಿಗೆ ತಲುಪುತ್ತೆ.ಮೇವರೆಗೂ ಬರ ಮುಂದುವರೆಯಲಿದ್ದು, ಹಣ ಬಿಡುಗಡೆ ಆಗಬೇಕಿದೆ.
ಬರ ಇದ್ರೂ ರೈತರ ಸಾಲ ಮನ್ನಾ ಮಾಡ್ತಿಲ್ಲ.ಹಣಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ.ಎಲ್ಲರೂ ನಾನು ಉಪಮುಖ್ಯಮಂತ್ರಿ ಅಂತ ಹೇಳಿಕೊಂಡು ತಿರುಗಾಡ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಅಶ್ವಥ್ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.