ಇಸ್ರೇಲ್ ಪ್ರವಾಸ ಮುಗಿಸಿಕೊಂಡು ಬಂದ ಮಾಜಿ ಸಿಎಂ ಕುಮಾರಸ್ವಾಮಿ ಆರೋಗ್ಯದಲ್ಲಿ ಏರುಪೇರಾಗಿದೆ. ಶನಿವಾರ ಮಾಜಿ ಸಿಎಂ ಕುಮಾರಸ್ವಾಮಿಗೆ ಹೃದಯ ಶಸ್ತ್ರಚಿಕಿತ್ಸೆ ನಡೆಯಲಿದೆ. ಜಯದೇವ ಆಸ್ಪತ್ರೆಯಲ್ಲಿ ಡಾ. ಮಂಜುನಾಥ್ ನೇತೃತ್ವದಲ್ಲಿ ಈ ಶಸ್ತ್ರಚಿಕಿತ್ಸೆ ನಡೆಯಲಿದೆ.
ಮೆಟಲ್ ವಾಲ್ವ್ ಹಾಕಿದರೆ ಮೆಡಿಸಿನ್ ತೆಗೆದುಕೊಳ್ಳುವಾಗ ವ್ಯತ್ಯಾಸವಾಗಿ ಬ್ರೈನ್ ಹೆಮರೇಜ್ ಸಮಸ್ಯೆ ಉಂಟಾಗಬಹುದು. ಹೀಗಾಗಿ, ಟಿಶು ವಾಲ್ವ್ ಬದಲಾವಣೆಗೆ ನಿರ್ಧರಿಸಲಾಗಿದೆ. 15 ವರ್ಷಗಳ ಕಾಲ ಯಾವುದೇ ಸಮಸ್ಯೆ ಬಾರದಂತೆ ಟಿಶ್ಯೂ ವಾಲ್ವ್ ಅಳವಡಿಸಲಾಗುತ್ತದೆ. 15 ವರ್ಷಗಳ ಬಳಿಕ ಸಮಸ್ಯೆ ಕಂಡುಬಮದರೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತೆ ಎಂದು ಹೇಳಲಾಗುತ್ತಿದೆ.. ಇಸ್ರೇಲ್ ಪ್ರವಾಸದಲ್ಲಿದ್ದ ಸಂದರ್ಭ ಕುಮಾರಸ್ವಾಮಿ ಆರೋಗ್ಯದಲ್ಲಿ ಏರುಪೇರಾಗಿ 98 ಕೆ.ಜಿ ಇದ್ದ ತೂಕ 7 ಕೆ.ಜಿ ಏರಿಕೆ ಕಂಡಿತ್ತು. ಇದೀಗ, 13 ಕೆ.ಜಿಯಷ್ಟು ತೂಕ ಇಳಿಸಲಾಗಿದೆ.
2007ರಲ್ಲಿ ಟಿಶ್ಯೂ ವಾಲ್ವ್ ಅಳವಡಿಸಲಾಗಿತ್ತು. ಇದೀಗ, ಅದರ ರಿ[ಪ್ಲೇಸ್ ಮೆಂಟ್ ಶಸ್ತ್ರಚಿಕಿತ್ಸೆ ನಡೆಯಲಿದೆ. ಹೀಗಾಗಿ, ಕುಮಾರಸ್ವಾಮಿ ನಾಳೆಯೇ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ