Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಿಎಂಟಿಸಿ ಚಾಲಕರಿಗೆ ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ನಿಷಿದ್ಧ; ಆದೇಶ ಮೀರಿದರೆ ಕೆಲಸದಿಂದ ಅಮಾನತು

ಬಿಎಂಟಿಸಿ ಚಾಲಕರಿಗೆ  ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ನಿಷಿದ್ಧ; ಆದೇಶ ಮೀರಿದರೆ ಕೆಲಸದಿಂದ ಅಮಾನತು
ಬೆಂಗಳೂರು , ಶನಿವಾರ, 10 ನವೆಂಬರ್ 2018 (12:46 IST)
ಬೆಂಗಳೂರು : ಫೋನ್ ಬಳಕೆಯಿಂದ ಆಕ್ಸಿಡೆಂಟ್ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವ ಹಿನ್ನಲೆಯಲ್ಲಿ ಇದೀಗ ಬಿಎಂಟಿಸಿ ಚಾಲಕರ ಮೊಬೈಲ್ ಬಳಕೆ ನಿಷಿದ್ಧಗೊಳಿಸಿ ಎಂದು ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.


ಬಿಎಂಟಿಸಿ ಚಾಲಕರಿಗೆ ಡ್ರೈವಿಂಗ್ ನಲ್ಲಿ ಮೊಬೈಲ್ ಫೋನ್ ಬಳಕೆ ಮಾಡುವಂತಿಲ್ಲ ಎಂದು ಸುತ್ತೋಲೆ ಕೊಟರೂ ಕೂಡ  ಎಚ್ಚೆತ್ತುಕೊಳ್ಳದ ಹಿನ್ನೆಲೆಯಲ್ಲಿ ಮೊಬೈಲ್ ಇಟ್ಟುಕೊಳ್ಳದಂತೆ ಇದೀಗ ಖಡಕ್ ಆದೇಶ ನೀಡಲಾಗಿದೆ ಎನ್ನಲಾಗಿದೆ.  ಒಂದು ವೇಳೆ ಆದೇಶ ಮೀರಿ ನಡೆದುಕೊಂಡರೆ ಕೆಲಸದಿಂದಲೇ ಅಮಾನತು ಮಾಡಲಾಗುತ್ತದೆ ಎಂದು ಇಲಾಖೆ ಎಚ್ಚರ ಕೂಡ ನೀಡಿದೆ.


ಆದ್ದರಿಂದ ಚಾಲಕರು ಇನ್ನು ಮುಂದೆ ಡ್ಯೂಟಿಯಲ್ಲಿ ಇರಬೇಕಾದರೆ ಮೊಬೈಲ್ ತರುವಂತಿಲ್ಲ. ಆಯಾ ಡಿಪೋಗಳಲ್ಲಿ ಫೋನ್ ಸ್ವಿಚ್ ಆಫ್ ಮಾಡಿ ಇಡಬೇಕು. ನವೆಂಬರ್ 15 ರಿಂದ ಈ ಹೊಸ ಕಾಯ್ದೆ ಬಿಎಂಟಿಸಿ ಚಾಲಕರಿಗೆ ಅನ್ವಯವಾಗಲಿದೆ ಎಂಬುದಾಗಿ ಇಲಾಖೆ ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಟಿಪ್ಪು ಜಯಂತಿ ವಿರೋಧಿಸಿದ್ದಕ್ಕೆ ಬಿಜೆಪಿ ಅಧಿಕಾರ ಕಳೆದುಕೊಂಡಿತು ಎಂದ ಜಮೀರ್ ಅಹಮ್ಮದ್ ಗೆ ಈಶ್ವರಪ್ಪ ತಿರುಗೇಟು