ಲಾಕ್ ಡೌನ್ ಕಾರಣ ಕಳೆದ ಎರಡು ತಿಂಗಳನಿಂದ ಸ್ಥಗಿತಗೊಂಡಿದ್ದ ದೇಶಿಯ ವಿಮಾನಯಾನ ಸಂಚಾರ ಪುನರಾರಂಭಗೊಂಡಿದೆ.
ಬೆಂಗಳೂರಿನಿಂದ ಸ್ಟಾರ್ ಏರ್ ಸಂಸ್ಥೆಯ ವಿಮಾನವು ಲಾಕ್ ಡೌನ್ ನಂತರ ಪ್ರಥಮ ಬಾರಿಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಭೂಸ್ಪರ್ಶ ಮಾಡಿತು.
25 ಜನ ಯಾತ್ರಿಕರನ್ನು ಕರೆದುಕೊಂಡು ಹೊರಟ ವಿಮಾನ 9.30 ಗಂಟೆಗೆ ಕಲಬುರಗಿ ನೆಲದಲ್ಲಿ ಲ್ಯಾಂಡ್ ಮಾಡಿತು. ತದನಂತರ 10.20 ಗಂಟೆಗೆ ಇಲ್ಲಿಂದ 20 ಪ್ರಯಾಣಿಕರನ್ನು ಕರೆದುಕೊಂಡು ಬೆಂಗಳೂರಿಗೆ ಮರು ಪ್ರಯಾಣ ಬೆಳೆಸಿತು.
ದೇಶಿಯ ವಿಮಾನಯಾನ ಸೇವೆಗೆ ಕೆಲ ದಿನಗಳ ಹಿಂದೆ ವಿಮಾನಯಾನ ಸಚಿವಾಲಯ ಹಸಿರು ನಿಶಾನೆ ತೋರಿದ ಪರಿಣಾಮ ಮೇ-25 ರಿಂದ ದೇಶದಾದ್ಯಂತ ಕೊರೋನಾ ಹರಡದಂತೆ ಸುರಕ್ಷತಾ ಕ್ರಮದೊಂದಿಗೆ ವಿಮಾನಯಾನ ಸಂಚಾರವು ಆರಂಭಗೊಂಡಿದೆ.