ವಿದ್ಯಾರ್ಥಿಗಳಲ್ಲಿ ನಾವೀನ್ಯತೆ, ಸೃಜನಶೀಲತೆ ಹಾಗೂ ಸಂಶೋಧನಾ ಪ್ರವೃತ್ತಿ ಬೆಳೆಸಲು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಆಯೋಜಿಸಲಾಗುವ ರಾಷ್ಟ್ರಮಟ್ಟದ ಇನ್‌ಸ್ಪೈರ್ (INSPIRE- Innovation in Science Pursuit for Inspired Research) ಸ್ಪರ್ಧೆಯಲ್ಲಿ ರಾಜ್ಯದ ಐವರು ವಿದ್ಯಾರ್ಥಿಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾದ ದೇಶದ ವಿವಿಧ ರಾಜ್ಯಗಳ 60 ವಿದ್ಯಾರ್ಥಿಗಳ ಪೈಕಿ ರಾಜ್ಯದ ಬೀದರ್‌ನ 10ನೇ ತರಗತಿ ವಿದ್ಯಾರ್ಥಿ ಓವೈಸ್ ಅಹ್ಮದ್ ಎರಡನೇ ಸ್ಥಾನ ಪಡೆದಿದ್ದಾರೆ.
ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಮತ್ತು ಅವರಿಗೆ ಮಾರ್ಗದರ್ಶನ ನೀಡಿದ ಶಿಕ್ಷಕರಿಗೆ
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಬಿ.ಸಿ. ನಾಗೇಶ್ ಅವರು ಅಭಿನಂದಿಸಿದ್ದಾರೆ.
ಪ್ರಶಸ್ತಿ ವಿಜೇತರು:
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾತಂಬ್ರ ಸರ್ಕಾರಿ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಓವೈಸ್ ಅಹ್ಮದ್ ಅವರ Safety horizontal stretcher ಪ್ರಾಜೆಕ್ಟ್ 2ನೇ ಸ್ಥಾನ ಪಡೆದಿದೆ.
ಹರಪನಹಳ್ಳಿ ತಾಲೂಕು ಹಲುವಾಗಲು ಗ್ರಾಮದ ಜಿಎಂಎಚ್‌ಪಿಎಸ್ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಕೆ. ಸಮರ್ಥ ಅವರ Homemade brick lifting tool using scrap Iron ಪ್ರಾಜೆಕ್ಟ್.
ರಾಮನಗರ ಜಿಲ್ಲೆ ಕನಕಪುರ ತಾಲೂಕು ಕಲ್ಲನಕುಪ್ಪೆಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ದೇವೇಗೌಡ ರೂಪಿಸಿದ
Advanced cattle shed ಪ್ರಾಜೆಕ್ಟ್.
ವಿಜಯಪುರ ಜಿಲ್ಲೆಯ Naad KDಯ ಸರ್ಕಾರಿ ಪ್ರೌಢ ಶಾಲೆ 10ನೇ ತರಗತಿ ವಿದ್ಯಾರ್ಥಿ ದೇವೀಂದ್ರ. ಬಿ. ಬಿರಾದಾರ್ ಅವರ Crop Cutter ಪ್ರಾಜೆಕ್ಟ್.
ಬೆಂಗಳೂರಿನ ಜಾಲಹಳ್ಳಿಯ ಕೇಂದ್ರಿಯ ವಿದ್ಯಾಲಯದ 10ನೇ ತರಗತಿ ವಿದ್ಯಾರ್ಥಿ ಆಯುಷ್ ಅವರ Road gullies ಪ್ರಾಜೆಕ್ಟ್.