ಬೆಂಗಳೂರು : ಏರ್ಟೆಲ್ ತನ್ನ ಗ್ರಾಹಕರಿಗೆ ಸ್ಮಾರ್ಟ್ ರಿಚಾರ್ಜ್ ವಿಭಾಗದಡಿ ಹೊಸದಾದ ಅಗ್ಗದ ಐದು ರಿಚಾರ್ಜ್ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ.
ಈ ಪ್ಲಾನ್ ಅಡಿ 34 ರೂಪಾಯಿ, 64 ರೂಪಾಯಿ, 94 ರೂಪಾಯಿ ಹಾಗೂ 144 ಮತ್ತು 244 ರೂಪಾಯಿ ರಿಚಾರ್ಜ್ ಪ್ಲಾನ್ ಬರಲಿದ್ದು, ಅದರಲ್ಲಿ 34 ರೂಪಾಯಿ ನಲ್ಲಿ ಗ್ರಾಹಕರಿಗೆ 100 ಎಂಬಿ ಡೇಟಾ ಹಾಗೂ 25.66 ಟಾಕ್ ಟೈಂ ಸಿಗಲಿದೆ. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಪ್ಲಾನ್ ನಲ್ಲಿ ಗ್ರಾಹಕರು ಸೆಕೆಂಡ್ ಗೆ 2.5 ಪೈಸೆ ದರದಲ್ಲಿ ಹೊರ ಹೋಗುವ ಕರೆ ಲಾಭ ಪಡೆಯಬಹುದಾಗಿದೆ.
ಏರ್ಟೆಲ್ ನ 64 ರೂಪಾಯಿ ಪ್ಲಾನ್ ನಲ್ಲಿ 200 ಎಂಬಿ ಡೇಟಾ ಹಾಗೂ 54 ರೂಪಾಯಿ ಟಾಕ್ ಟೈಂ ಲಭ್ಯವಿದೆ. ಇದು ಕೂಡ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಹಾಗೇ 94 ರೂಪಾಯಿಗಳ ಪ್ಲಾನ್ ನಲ್ಲಿ ಗ್ರಾಹಕರಿಗೆ 500 ಎಂಬಿ ಡೇಟಾ ಸಿಗಲಿದೆ. 94 ರೂಪಾಯಿ ಟಾಕ್ ಟೈಂ ಸಿಗಲಿದ್ದು, 28 ದಿನಗಳ ವ್ಯಾಲಿಡಿಟಿ ಹೊಂದಿದೆ.
144 ರೂಪಾಯಿ ಯೋಜನೆಯಲ್ಲಿ 1ಜಿಬಿ ಡೇಟಾ ಸಿಗಲಿದ್ದು, 144 ರೂಪಾಯಿ ಫುಲ್ ಟಾಕ್ ಟೈಂ ಸಿಗಲಿದೆ. ಇದು 42 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇನ್ನು 244 ರೂಪಾಯಿ ಯೋಜನೆಯಲ್ಲಿ ಗ್ರಾಹಕರಿಗೆ 2 ಜಿಬಿ ಡೇಟಾ ಹಾಗೂ 244 ರೂಪಾಯಿ ಫುಲ್ ಟಾಕ್ ಟೈಂ ಸಿಗಲಿದೆ. 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.