ಮೊದಲು ನಾವೆಲ್ಲರು ಭಾರತೀಯರು ಎನ್ನುವುದನ್ನು ಪ್ರತಿಯೊಬ್ಬರು ಅರಿಯಬೇಕು. ಕನ್ನಡಿಗರು ಮತ್ತು ಮರಾಠಿಗರ ನಡುವೆ ಕೆಲ ಕಿಡಿಗೇಡಿಗಳು ವೈಮನಸ್ಸು ಮೂಡಿಸುತ್ತಿವೆ ಎಂದು ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ
ನಗರದಲ್ಲಿ ಎಂಇಎಸ್ ಪುಂಡರ ಪುಂಡಾಟಿಕೆ, ಉದ್ಧಟತನದ ವರ್ತನೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಕೆಲವರು ಸ್ವಹಿತಾಸಕ್ತಿಗಾಗಿ ಇಂತಹ ಸಂಚು ನಡೆಸುತ್ತಿದ್ದಾರೆ. ಇದು ಭಾರತ, ಪಾಕ್ ಗಡಿ ಸಮಸ್ಯೆಯಲ್ಲ. ಮರಾಠಿಗರು ಉಗ್ರರಲ್ಲ. ನಾವೆಲ್ಲರು ಒಂದಾಗಿ ಸಹೋದರತ್ವದಿಂದ ಬಾಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಲಖನ್ ಜಾರಕಿಹೊಳಿ ಸ್ಪರ್ಧೆಯ ಬಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ನಮ್ಮ ನಡುವಿನ ಭಿನ್ನಮತ ಅಂತ್ಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಳಗಾವಿ ನಗರದಲ್ಲಿ ಕಾಂಗ್ರೆಸ್ ಪಕ್ಷ ಸಧೃಡವಾಗಿದೆ. ಸಹೋದರ ಸತೀಶ್ ಜಾರಕಿಹೊಳಿ ಎಐಸಿಸಿ ಕಾರ್ಯದರ್ಶಿಯಾಗಿರುವುದು ಸಂತಸ ತಂದಿದೆ. ನಮ್ಮ ಭಿನ್ನಾಭಿಪ್ರಾಯ ಅಂತ್ಯವಾಗಿರುವುದರಿಂದ ವಿರೋಧಿಗಳಿಗೆ ಹತಾಷೆಯಾಗಿದೆ ಎಂದು ತಿರುಗೇಟು ನೀಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.