Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರಥಮ ಅಂಚೆ ಕನ್ನಡ ಸಾಹಿತ್ಯ ಸಮ್ಮೇಳನ

ಪ್ರಥಮ ಅಂಚೆ ಕನ್ನಡ ಸಾಹಿತ್ಯ ಸಮ್ಮೇಳನ
ಉಡುಪಿ , ಭಾನುವಾರ, 1 ಜುಲೈ 2018 (16:36 IST)
ಪ್ರಥಮ ಅಂಚೆ ಕನ್ನಡ ಸಾಹಿತ್ಯ ಸಮ್ಮೇಳನವು  ಉಡುಪಿಯ ಅಂಬಲಪಾಡಿಯ ದೇವಸ್ಥಾನದ ಭವಾನಿ ಮಂಟಪದಲ್ಲಿ ನಡೆಯಿತು. ಅಂಚೆ ಮನೋರಂಜನಾ ಕೂಟ ಉಡುಪಿ ಹಾಗೂ ಕುಂದಾಪುರ ಇವರ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಂಬಲಪಾಡಿ ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನದ ಧರ್ಮಧರ್ಶಿ ನಿಬಿ ವಿಜಯ್ ಬಲ್ಲಾಳ್ ಉದ್ಘಾಟಿಸಿದ್ರು. ಬಳಿಕ ಮಾತನಾಡಿದ ಅವರು, ಸೃಜನಾ ಶೀಲತೆ ಇದ್ದರೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಉಳಿಯುತ್ತದೆ ಎಂದ್ರು.

ಉಡುಪಿ ಶಾಸಕ ರಘುಪತಿ ಭಟ್, ಈ ಅಂದರ್ಭ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ್ರು.  ಅಂಚೆ ಸಾಹಿತ್ಯ ಸಮ್ಮೇಳನ ಇಡೀ ದೇಶದಲ್ಲಿ ಉಡುಪಿಯಲ್ಲಿ ಮಾತ್ರ ಪ್ರಥಮ ಬಾರೀ ನಡೆಯುತ್ತಿದೆ. ಇದು ನಿಜಕ್ಕೂ ಶ್ಲಾಂಘನೆಗೆ ಆರ್ಹವಾದ ಕಾರ್ಯಕ್ರಮ. ಸಮ್ಮೇಳನದಿಂದ  ಹೊಸ ಸಾಹಿತಿಗಳು ಹೊರ ಹೊಮ್ಮಲು ಸಾದ್ಯವಾಗುತ್ತದೆ ಎಂದು ಪ್ರಶಂಸೆ ವ್ಯಕ್ತ ಪಡಿಸಿದ್ರು.
 
 ಉಡುಪಿ ವಿಭಾಗದ ಅಂಚೆ ಅಧೀಕ್ಷಕ ರಾಜಶೇಖರ್ ಭಟ್, ಸಮ್ಮೇಳನದ ಗೌರವ ಅದ್ಯಕ್ಷ ಸುಧಾಕರ್ ಜಿ ದೇವಾಡಿಗ,  ಸೂರ್ಯ ನಾರಯಣ್ ರಾವ್, ಕನ್ನಡ ಸಾಹಿತ್ಯ ಪರಿಷತ್ತ್ ನ ಜಿಲ್ಲಾದ್ಯಕ್ಷ ನೀಲಾವರ ಸುರೇಂದ್ರ ಅಡಿಗ, ದಕ್ಷಿಣ  ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ ಅದ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ರಾಷ್ಟ್ರ ಪ್ರಶಸ್ತಿ ಪುರಷ್ಕೃತ ಕುದಿ ವಸಂತ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಅದ್ಧೂರಿ ಕಲ್ಯಾಣೋತ್ಸವ: ಸಹಸ್ರಾರು ಭಕ್ತರು ಸಾಕ್ಷಿ