ಅತ್ತಿಬೆಲೆಯ ಪಟಾಕಿ ದುರಂತದಲ್ಲಿ 17 ಮಂದಿ ಸಾವನ್ನಪ್ಪಿದ್ರು .ಈ ಹಿನ್ನೆಲೆ ಬೆಂಗಳೂರು ನಗರದಲ್ಲಿ ಪಟಾಕಿ ಮಾರಾಟ ನಿಷೇದ ಮಾಡಲಾಗಿದೆ.ನಗರದಲ್ಲಿ ಅನುಮತಿ ಇಲ್ಲದೆ ಮಾರಾಟ ಮಾಡಬಾರದು ಎಂದು ಬಿಬಿಎಂಪಿ ಖಡಕ್ ಆದೇಶ ನೀಡಿತ್ತು.ಬಿಬಿಎಂಪಿ ನಿಗದಿತ ಪ್ರದೇಶದಲ್ಲಿ ಕೆಲವರಿಗೆ ಮಾತ್ರ ಮಾರಾಟಕ್ಕೆ ಅನುಮತಿ ನೀಡಿತ್ತು.ಗ್ರೀನ್ ಪಟಾಕಿಗಳನ್ನ ಮಾತ್ರ ಮಾರಾಟ ಮಾಡೋಕೆ ಅನುಮತಿ ನೀಡಲಾಗಿತ್ತು .ಅಗ್ನಿ ದುರಂತದ ನಂತರ, ಅನುಮತಿಯಿಲ್ಲದೆ ದೊಡ್ಡ ಪ್ರಮಾಣದಲ್ಲಿ ಪಟಾಕಿಗಳನ್ನು ಸಂಗ್ರಹಿಸಿದ್ದ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಸಿಜ್ ಮಾಡಿದ್ದಾರೆ.
ಕರ್ನಾಟಕದಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಿದ ನಂತರ ಬೆಂಗಳೂರಿನ ಪಟಾಕಿ ಮಾರಾಟಗಾರರು ತಮಿಳುನಾಡಿ ನತ್ತ ಮುಖ ಮಾಡಿದ್ದಾರೆ.ಬೆಂಗಳೂರಿನ ಪಟಾಕಿ ಮಾರಾಟಗಾರರು ತಮಿಳುನಾಡಿನಲ್ಲಿ ಪಟಾಕಿ ಮಾರಾಟ ಮಾಡಲು ತಾತ್ಕಾಲಿಕ ಅಂಗಡಿಗಳನ್ನು ತೆರೆದಿದ್ದಾರೆ.ಹೀಗಾಗಿ ಪಟಾಕಿ ಮಾರಾಟ ಗಾರರಿಗೆ ಬಾರಿ ಹೊಡೆತ ಬಿದ್ದಿದೆ.